ಯುವಿ ವಿರುದ್ಧ ಗೆದ್ದ ಉಸೇನ್ ಬೋಲ್ಟ್
ಬೆಂಗಳೂರು: ಪುಮಾ ವತಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಹಾಗೂ ಉಸೇನ್ ಬೋಲ್ಟ್ ನೇತೃತ್ವದ ತಂಡಗಳ ನಡುವೆ 4 ಓವರ್‌ಗಳ ಸೌಹಾರ್ದ್ ಕ್ರಿಕೆಟ್ ಪಂದ್ಯವನ್ನು ನಡೆಸಲಾಯಿತು.
ಈ ಪಂದ್ಯದಲ್ಲಿ ಬೋಲ್ಟ್ ತಂಡ ಯುವರಾಜ್ ತಂಡದ ವಿರುದ್ಧ ಗೆಲುವು ದಾಖಲಿಸಿತು. ಪ್ರತಿ ತಂಡದಲ್ಲಿ ಕೇವಲ 7 ಆಟಗಾರರಿದ್ದರು. ಯುವರಾಜ್ ತಂದಲ್ಲಿ ಮುಂಬೈನ ಆದಿತ್ಯ ಹಾಗೂ ದೆಹಲಿ ಆಟಗಾರ ಸನಿಲ್ ಮತ್ತು ನಾಲ್ವರು ಅಭಿಮಾನಿಗಳಿದ್ದರು. ಇನ್ನು ಬೋಲ್ಟ್ ತಂಡದಲ್ಲಿ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಜಮೈಕಾದ ಮತ್ತೋರ್ವ ಸ್ಟ್ರಿಂಟರ್ ಯುಗೇನ್ ಮತ್ತು ಅಭಿಮಾನಿಗಳು ಇದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಯುವರಾಜ್ ತಂಡ 4 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 58ರನ್ ಗಳಿಸಿದರೆ, ಬೋಲ್ಟ್ ತಂಡ 4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63ರನ್ ದಾಖಲಿಸಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬೋಲ್ಟ್, ಯುವರಾಜ್ ಸಿಂಗ್ ಅವರಿಗೆ ಸಿಡಿಸಿದ 3 ಸಿಕ್ಸರ್‌ಗಳು ಅಭಿಮಾನಿಗಳನ್ನು ರಂಜಿಸಿತು.
ಇದಕ್ಕು ಮೊದಲು ಉಭಯ ತಂಡಗಳ ನಡುವೆ ಬಾಲ್ ಔಟ್ ನಡೆಸಲಾಗಿದ್ದು, ಅದರಲ್ಲಿ ಎರಡು ತಂಡ 3 ಯಶಸ್ವಿ ಬಾಲ್ ಔಟ್ ಮಾಡಿ ಟೈ ಮಾಡಿಕೊಂಡಿತು.