ಸೆಮೀಸ್‌ಗೆ ಸಾನಿಯಾ
ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ...
ನ್ಯೂಯಾರ್ಕ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಯುಎಸ್ ಓಪನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಕ್ವಾರ್ಟಫೈನಲ್ ಪಂದ್ಯದಲ್ಲಿ ಎದುರಾಳಿ ಜೋಡಿ ಅರ್ಧಕ್ಕೆ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಸಾನಿಯಾ-ಕಾರಾ ಜೋಡಿ ಸುಲಭವಾಗಿ ಸೆಮೀಸ್ ಪ್ರವೇಶಿಸಿತು.
3ನೇ ಶೇಯಾಂಕ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಜಕಸ್ತಾನದ ಜರಿನಾ ದಿಯಾಸ್ ಮತ್ತು ಚೀನಾದ ಯಿಫಾನ್ ಕ್ಸೂ ಜೋಡಿ ವಿರುದ್ಧ 6-1, 1-0 ಅಂತರದಿಂದ ಮುನ್ನಡೆ ಸಾಧಿಸುತ್ತಿದ್ದಂತೆ, ಕಜಕಸ್ಥಾನ ಮತ್ತು ಚೀನಾ ಜೋಡಿ ಪಂದ್ಯದಲ್ಲಿ ಅರ್ಧಕ್ಕೆ ಹಿಂದೆ ಸರಿಯಿತು.
ಫೆಡರರ್ ಕ್ವಾರ್ಟರ್ ಫೈನಲ್‌ಗೆ
ನ್ಯೂಯರ್ಕ್: ಐದು ಬಾರಿ ಚಾಂಪಿಯನ್ ರೋಜರ್ ಫೆಡರರ್ ಆರನೇ ಬಾರಿಗೆ ಯುಎಸ್ ಓಪನ್‌ನಲ್ಲಿ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದು, ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಪೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಕಳೆದ 11 ವರ್ಷಗಳಲ್ಲಿ ರೋಜರ್ ಫೆಡರರ್ ಅವರು 10ನೇ ಬಾರಿ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಈಗ ಫೆಡರರ್ ಫ್ರಾನ್ಸ್‌ನ ಸ್ಟಾರ್ ಆಟಗಾರ ಜೀಲ್ ಮೋನ್ಫಿಲ್ಸ್ ಅವರನ್ನು ಎದುರಿಸಲಿದ್ದಾರೆ.
4ನೇ ಸುತ್ತಿನ ಪಂದ್ಯದಲ್ಲಿ ಫೆಡರರ್ ಅವರು ಸ್ಪೇನ್‌ನ ರಾಬರ್ಟೋ ಬ್ಯೂ ಟಿಸ್ಟಾ ಅಗತ್ ಅವರನ್ನು 6-4, 6-3,6-2 ಸೆಟ್‌ಗಳಿಂದ ಸುಲಭವಾಗಿ ಪರಾಭವಗೊಳಿಸಿದರು. ಇನ್ನೊಂದೆಡೆ 20ನೇ ಶ್ರೇಯಾಂಕ ಪಡೆದ ಗ್ರಿಗೋರ್ ದಿಮಿತ್ರೋವ್ ಅವರನ್ನು 7-5, 7-6(8/6), 7-5 ಸೆಟ್‌ಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿಗೆ ಯುಎಸ್ ಓಪನ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಇದುವರೆಗೂ ಇಬ್ಬರು ಆಟಗಾರರು ಒಟ್ಟು ಒಂಬತ್ತು ಬಾರಿ ಮುಖಾಮುಖಿಯಾಗಿದ್ದು, 7 ಬಾರಿ ಫೆಡರರ್ ಗೆದ್ದರೆ, 2 ಬಾರಿ ಮಾತ್ರ ಮೋಲ್ಫಿಲ್ಸ್ ವಿಜಯಿಯಾಗಿದ್ದಾರೆ. ಹೀಗಾಗಿ 17 ಬಾರಿ ಗ್ರಾನ್ ಸ್ಲ್ಯಾಮ್ ಗೆದ್ದಿರುವ ಫೆಡರರ್ ಅವರೇ ಈಗ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಗೆಲ್ಲುವ ಫೇವರಿಟ್.
ಬೆರ್ಡಿಚ್ ಕ್ವಾರ್ಟರ್‌ಫೈನಲ್‌ಗೆ: ಚೆಕ್ ಗಣರಾಜ್ಯದ ಥಾಮಸ್ ಬರ್ಡಿಚ್ ಅವರು ಸಹ ಪುರುಷರು ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. 4ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೋಮಿನಿಕ್ ಥೀಮ್ ಅವರನ್ನು 6-1, 6-2, 6-4 ಸೆಟ್‌ಗಳಿಂದ ಸೋಲಿಸಿದರು.