ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ 295 ರನ್‌ಗಳ ಗುರಿ

ಇಂಗ್ಲೆಂಡ್-ಭಾರತ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿದ್ದು, ಭಾರತಕ್ಕೆ ಗೆಲ್ಲಲು 295 ರನ್‌ಗಳ ಬೃಹತ್ ಮೊತ್ತವನ್ನು ನೀಡಿದೆ.

Vishwanath S
Updated On : 5 Sept 2014, 6:29 am

ಹೆಡಿಂಗ್ಲೇಲಿ/ಲೀಡ್ಸ್: ಇಂಗ್ಲೆಂಡ್-ಭಾರತ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿದ್ದು, ಭಾರತಕ್ಕೆ ಗೆಲ್ಲಲು 295 ರನ್‌ಗಳ ಬೃಹತ್ ಮೊತ್ತವನ್ನು ನೀಡಿದೆ.

ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದ ಇಂಗ್ಲೆಂಡ್ ಆಟಗಾರರು ಬ್ಯಾಟಿಂಗ್ ಆರಂಭಿಸಿದರು. ಆರಂಭಿಕರಾಗಿ ಅಲೆಸ್ಟೇರ್ ಕುಕ್ ಹಾಗೂ ಅಲೆಕ್ಸ್ ಹೇಲ್ಸ್ 26 ರನ್‌ಗಳ ಜೊತೆಯಾಟ ನೀಡಿದರು. 4 ರನ್ ಗಳಿಸಿದ್ದ ಹೇಲ್ಸ್ ಉಮೇಶ್ ಯಾದವ್ ಬೌಲಿಂಗ್‌ಗೆ ರಹಾನೆಗೆ ಕ್ಯಾಚ್ ನೀಡಿ ನಿರ್ಗಮಸಿದರು.

ನಂತರ ಅಲೆಸ್ಟೇರ್ ಕುಕ್‌ಗೆ ಜೊತೆಯಾದ ಮೊಯಿನ್ ಅಲಿ ಕೇವಲ 9 ರನ್‌ಗಳಿಸಿ ಭುವನೇಶ್ವರ್ ಬೌಲಿಂಗ್‌ನಲ್ಲಿ ಔಟಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕುಕ್ 46 ಗಳಿಸಿದ್ದಾಗ ಸುರೇಶ್ ರೈನಾ ಸ್ಪೀನ್‌ಗೆ ಔಟಾಗಿ ಅರ್ಧಶತಕ ವಂಚಿತರಾದರು. ಎಯೊನ್ ಮಾರ್ಗನ್(14) ಸಹ ಅಲ್ಪ ಮೊತ್ತಕ್ಕೆ ಔಟಾದರು.

ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದ ರೂಟ್ ಹಾಗೂ ಬಟ್ಲರ್. 49 ರನ್‌ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಬಟ್ಲರ್ ರನ್ ಔಟಾದರೆ ಶತಕ ಸಿಡಿಸಿದ್ದ ರೂಟ್ 113 ರನ್‌ಗೆ ಅಶ್ವಿನ್ ಬಲಗೆ ಬಿದ್ದರು. 9 ರನ್ ಗಳಿಸಿದ್ದ ವೋಕ್ಸ್ ಮಹಮದ್ ಶಮಿ ಎಸೆತಕ್ಕೆ ಬೌಲ್ಡಾದರು. ಬೇನ್ ಸ್ಟೋಕ್ಸ್ ಔಟಾಗದೆ 33 ರನ್ ಹಾಗೂ ಜೇಮ್ಸ್ ಟ್ರೇಡ್‌ವೇಲ್ 8 ರನ್ ಗಳಿಸಿದರು.

ಭಾರತ ಪರ ಬೌಲಿಂಗ್ ಮಾಡಿದ ಮಹಮದ್ ಶಮಿ 52 ರನ್ ನೀಡಿ 2 ವಿಕೆಟ್ ಗಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement