ಸಾನಿಯಾ ಜೋಡಿ ಫೈನಲ್ಗೆ
ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿನಲ್ಲಿ ಖ್ಯಾತ ಟೆನಿಸ್ ತಾರೆ ಸಾನಿಯಾ...
ನ್ಯೂಯಾರ್ಕ್: ಯುಎಸ್ ಓಪನ್ ಟೆನಿಸ್ ಚಾಂಪಿಯನ್ಶಿನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್ನ ಬ್ರೂನೋ ಸೋರೆಸ್ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿ ಶ್ರೇಯಾಂಕ ಪಡೆಯದ ಚೈನೀಸ್ ತೈಪೆ ಮತ್ತು ಇಂಗ್ಲೆಂಡ್ನ ವೈ.ಜೆ.ಚಾನ್ ಮತ್ತು ರಾಸ್ ಹಚಿನ್ಸ್ ಜೋಡಿಯನ್ನು 7-5, 4-6, 10-7 ಸೆಟ್ಗಳಿಂದ ಸೋಲಿಸಿತು. ಅಲ್ಲದೆ ಈ ಜೋಡಿ ಇದೇ ಮೊದಲ ಬಾರಿಗೆ ಗ್ರಾನ್ಸ್ಲ್ಯಾಮ್ನಲ್ಲಿ ಫೈನಲ್ ಪ್ರವೇಶಿಸಿದೆ.
ಈ ಸಾನಿಯಾ ಅವರು ಯುಎಸ್ ಓಪನ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಇನ್ನೊಂದು ಪಂದ್ಯದಲ್ಲಿ ಜಯ ಕಂಡುಕೊಳ್ಳಬೇಕಿದೆ. ಭಾರತದ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜಿಂಬಾಬ್ವೆಯ ಕಾರಾ ಬ್ಲಾಕ್ ಅವರೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.