ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೋತು ವಿದಾಯ ಹೇಳಿದ ಭಾರತ

ಹೊಡಿಬಡಿ ಆಟದಲ್ಲಿ ಎಂದಿನಂತೆ ಶೈನ್ ಆಟವಾಡಿದ ವಿರಾಟ್ ಕೊಹ್ಲಿ...

Vishwanath S
Updated On : 8 Sept 2014, 5:39 am

ಬರ್ಮಿಂಗ್‌ಹ್ಯಾಮ್: ಹೊಡಿಬಡಿ ಆಟದಲ್ಲಿ ಎಂದಿನಂತೆ ಶೈನ್ ಆಟವಾಡಿದ ವಿರಾಟ್ ಕೊಹ್ಲಿ ಭಾರತವನ್ನು ಗೆಲವಿನತ್ತ ಮುಖಮಾಡಿ ನಿಲ್ಲಿಸಿದ್ದರಾದರೂ ಇತರೆ ದಾಂಡಿಗರು ವೈಫಲ್ಯ ಅನುಭವಿಸಿದ ಪರಿಣಾಮ ಮಹೇಂದ್ರ ಸಿಂಗ್ ಧೋನಿ ಪಡೆ ಏಕೈಕ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 3 ರನ್‌ಗಳ ಅಂತರದಲ್ಲಿ ತಲೆಬಾಗಿಸುವಂತಾಯಿತು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲಲು 181 ರನ್‌ಗಳ ಕಠಿಣ ಗುರಿ ಪಡೆದಿದ್ದ ಭಾರತ, 5 ವಿಕೆಟ್ ನಷ್ಟಕ್ಕೆ 177 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ ಸೋಲಿನೊಂದಿಗೆ ಇಂಗ್ಲೆಂಡ್‌ನ ದೀರ್ಘಾವಧಿಯ ಪ್ರವಾಸಕ್ಕೆ ವಿದಾಯ ಹೇಳುವಂತಾಯಿತು.

ಸ್ಕೋರ್ ವಿವರ


ಇಂಗ್ಲೆಂಡ್ 20 ಓವರುಗಳಲ್ಲಿ 7 ವಿಕೆಟ್‌ಗೆ 180
ಜೇಸನ್ ರಾಯ್ ಸಿ ರಹಾನೆ ಬಿ ಶಮಿ 8, ಅಲೆಕ್ಸ್ ಹಾಲ್ಸ್ ಸಿ ರಹಾನೆ ಬಿ ರವಿಂದ್ರ ಜಡೇಜಾ 40, ಮೊಯೀನ್ ಅಲಿ ಸಿ ರಹಾನೆ ಬಿ ಮೋಹಿತ್ ಶರ್ಮಾ 0, ಜೋ ರೂಟ್ ಬಿ ರಾಯುಡು ಬಿ ಕರಣ್ ಶರ್ಮಾ 26, ಆಯನ್ ಮೋರ್ಗನ್ ಸಿ ರಹಾನೆ ಬಿ ಶಮಿ 71, ಜೋಸ್ ಬಟ್ಲರ್ ಸಿ ರಾಯುಡು ಬಿ ಶಮಿ 10, ರವಿ ಬೊಪಾರ ಅಜೇಯ 21, ಕ್ರಿಸ್ ವೋಕ್ಸ್ ರನೌಟ್ 0.
ಇತರೆ: (ಲೆಗ್‌ಬೈ-3, ನೋಬಾಲ್-1 )4.
ಬೌಲಿಂಗ್ ವಿವರ: ಅಶ್ವಿನ್ 4-0-37-0, ಮೋಹಿತ್ ಶರ್ಮಾ 4-0-38-3, ಕರಣ್ ಶರ್ಮಾ 4-0-28-1, ಜಡೇಜಾ 4-0-35-1.

ಭಾರತ 20 ಓವರುಗಳಲ್ಲಿ 5 ವಿಕೆಟ್‌ಗೆ 177
ಅಜಿಂಕ್ಯ ರಹಾನೆ ಬಿ ಅಲಿ 8, ಶಿಖರ್ ಧವನ್ ಬಿ ವೋಕ್ಸ್ 33, ವಿರಾಟ್ ಕೊಹ್ಲಿ ಸಿ ಹಾಲ್ಸ್ ಬಿ ಫಿನ್ 66, ಸುರೇಶ್ ರೈನಾ ಬಿ ಗುರ್ನಿ 25, ಮಹೇಂದ್ರ ಸಿಂಗ್ ಧೋನಿ ಅಜೇಯ 27, ಜಡೇಜಾ ರನೌಟ್ 7, ರಾಯುಡು ಅಜೇಯ 3.
ಇತರೆ: (ಲೆಗ್‌ಬೈ-4, ವೈ-4) 8.
ಬೌಲಿಂಗ್ ವಿವರ: ಫಿನ್ 4-0-28-1, ಅಲಿ 3-0-31-1, ಗುರ್ನಿ 4-0-29-1, ವೋಕ್ಸ್ 4-0-43-1, ಬೊಪಾರ 1-0-14-0, ಟ್ರೆಡ್‌ವೆಲ್ 4-0-28-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement