ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವಕಪ್ ವೇಳೆ ಸುಂದರ ಹುಡಗಿಯರ ಬಗ್ಗೆ ಹುಷಾರ್, ಕ್ರಿಕೆಟಿಗರಿಗೆ ಎಚ್ಚರಿಕೆ

ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ...

Mainashree
Updated On : 11 Sept 2014, 9:49 am

ವೆಲ್ಲಿಂಗ್ಟನ್: ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಕೇವಲ ಆಟದ ಬಗ್ಗೆ ಮಾತ್ರ ಗಮನ ಹರಿಸಿ, ಸುಂದರವಾದ ಲಲನೆಯರ ಬಗ್ಗೆ ಯೋಚನೆ ಬೇಡ ಎಂದು ನ್ಯೂಜಿಲೆಂಡ್ ಪೊಲೀಸರು ಕ್ರಿಕೆಟ್ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಶ್ವಕಪ್ ಪಂದ್ಯಾವಳಿಯ ವೇಳೆ ಬುಕ್ಕಿ ಹಾಗೂ ಮ್ಯಾಚ್ ಫಿಕ್ಸರ್‌ಗಳು ಆಟಗಾರರನ್ನು ತಮ್ಮ ಜಾಲಕ್ಕೆ ಸೆಳೆಯುವ ನಿಟ್ಟಿನಲ್ಲಿ, ವಿವಿಧ ರಾಷ್ಟ್ರಗಳ ಸುಂದರವಾದ ಹುಡುಗಿಯರನ್ನು ಬಳಸುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಪರಿಚಿತ ಮಹಿಳೆಯರಿಂದ ಸಾಧ್ಯವಾದಷ್ಟು ದೂರವಿರುವಂತೆ ಆಟಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಭ್ರಷ್ಟಾಚಾರ ಹಾಗೂ ಕಳ್ಳಾಟದ ಕರಿನೆರಳು ಮುಂಬರುವ ವಿಶ್ವಕಪ್ ಕ್ರಿಕೆಟ್ ಮೇಲೆ ನೆಟ್ಟಿದೆ ಹಾಗಾಗಿ ವಿಶ್ವಕಪ್ ಪಂದ್ಯಾವಳಿಯನ್ನು ಉತ್ತಮವಾಗಿ ಆಯೋಜಿಸುವ ನಿಟ್ಟಿನಲ್ಲಿ ನ್ಯೂಜಿಲೆಂಡ್ ಪೊಲೀಸರು ಎಚ್ಚರಿಕೆ ನೀಡಿರುವುದು ಅಲ್ಲಿನ ಪತ್ರಿಕೆಗಳಲ್ಲಿ ವರದಿಯಾಗಿವೆ.

ಆಟಗಾರರನ್ನು ಸುಲಭವಾಗಿ ಸೆಳೆಯಲು ಸುಂದರವಾದ ಹುಡುಗಿಯರನ್ನು ಅಸ್ತ್ರಗಳಾಗಿ ಬಳಸಲು ಬುಕ್ಕಿ ಹಾಗೂ ಫಿಕ್ಸಿಂಗ್ ಗುಂಪುಗಳು ಯೋಜನೆ ರೂಪಿಸಿದ್ದು, ದೇಶದಾದ್ಯಂತ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಆಟಗಾರರೊಂದಿಗೆ ಹುಡುಗಿಯರು ಸಂಪರ್ಕ ಸಾಧಿಸಿ ನಂತರ ಅವರನ್ನು ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಓಲೈಸಬಹುದು.

ಒಂದು ವೇಳೆ ಒಪ್ಪದಿದ್ದಾಗ ಬ್ಲ್ಯಾಕ್‌ಮೇಲ್ ತಂತ್ರವನ್ನು ಅನುಸರಿಸಲು ಮುಂದಾಗುತ್ತಾರೆ ಎಂದು ಪೊಲೀಸ್ ಅಧಿಕಾರಿ ಸಾಂದ್ರಾ ಮ್ಯಾಂಡರ್ಸನ್ ತಿಳಿಸಿದ್ದಾರೆ.

ಈ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಜಾಲದ ವಿರುದ್ಧ ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಖ್ಯಾತ ಆಟಗಾರ ಲೂ ವಿನ್ಸೆಂಟ್ ಪ್ರಕರಣ ನ್ಯೂಜಿಲೆಂಡ್ ಕ್ರಿಕೆಟ್ ಅನ್ನು ಬೆಚ್ಚಿ ಬೀಳಿಸಿತ್ತು. ಹಾಗಾಗಿ ಪೊಲೀಸರು ಮುಂದಿನ ವಿಶ್ವಕಪ್ ಬಗ್ಗೆ ಎಲ್ಲಾ ದೇಶದ ಆಟಗಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement