ಪೀಲೆ, ಅಲಿ ಮಾದರಿಯಲ್ಲಿ ನಿವೃತ್ತಿ ಹೇಳಬಯಸುತ್ತೇನೆ: ಲಿಯಾಂಡರ್ ಪೇಸ್
ಬೆಂಗಳೂರು: ಜಾಗತಿಕ ಕ್ರೀಡಾ ದಿಗ್ಗಜರಾದ ಫುಟ್ಬಾಲ್ ತಾರೆ ಪೀಲೆ ಮತ್ತು ಬಾಕ್ಸಿಂಗ್ ತಾರೆ ಮೊಹ್ಮದ್ ಅಲಿ ಅವರಂತೆ ಉನ್ನತ ಶಿಖರಕ್ಕೇರುವ ಮೂಲಕ ಟೆನಿಸ್‌ಗೆ ವಿದಾಯ ಹೇಳಬಯಸುತ್ತೇನೆ ಎಂದು ಎಂದು ಭಾರತದ ಟೆನಿಸ್ ದಂತಕತೆ ಲಿಯಾಂಡರ್ ಪೇಸ್ ಸೋಮವಾರ ಹೇಳಿದ್ದಾರೆ.
ಈ ಇಬ್ಬರು ವಿಶ್ವ ಕ್ರೀಡಾ ತಾರೆಗಳು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದಾಗ ಉತ್ತುಂಗಕ್ಕೇರಿದ್ದರು. 2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ, ಅಂತಹ ಅವಕಾಶ ನನಗೆ ಒದಗಿಬರಲಿದೆ ಎಂದಿದ್ದಾರೆ ಪೇಸ್.
ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದರೆ, ಅಂತಹ ಭಾಗ್ಯಕ್ಕೆ ನಾನು ಪಾತ್ರವಾಗಲಿದ್ದೇನೆ. ವೃತ್ತಿ ಜೀವನದಲ್ಲಿ ಕೀರ್ತಿ ಶಿಖರಕ್ಕೇರಿದ ಮೊಹ್ಮದ್ ಅಲಿಯನ್ನು ನಾನು ಸದಾ ನೆನಪಿಸಿಕೊಳುತ್ತೇನೆ. ಅವರಲ್ಲದೆ, ಪೀಲೆ, ಮೈಕೆಲ್, ಜೋರ್ಡಾನ್, ಕಾರ್ಲ್ ಲೂಯಿಸ್ ಅವರ ಸಾಧನೆಗಳು ನನಗೆ ಮಾದರಿಯಾಗಿವೆ ಎಂದಿದ್ದಾರೆ.
ಫಿಟ್ನೆಸ್ ಮತ್ತು ಉತ್ಸಾಹದೊಂದಿಗೆ ಸಾಧಿಸುವ ಛಲವೊಂದಿದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಎಂಬ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ. 14 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕವನ್ನು ಪೇಸ್ ಗೆದ್ದುಕೊಂಡಿದ್ದರು.