ಬಿರಿಯಾನಿಗೊಸ್ಕರ 5ಸ್ಟಾರ್ ಹೊಟೇಲ್ ತೊರೆದ ಧೋನಿ
ಹೈದರಬಾದ್‌ನ ಫೈವ್ ಸ್ಟಾರ್ ಹೊಟೇಲ್...
ಹೈದರಾಬಾದ್: ಹೈದರಬಾದ್‌ನ ಫೈವ್ ಸ್ಟಾರ್ ಹೊಟೇಲ್‌ನಲ್ಲಿ ತಂಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತವರ ತಂಡ ಬಿರಿಯಾನಿಗೊಸ್ಕರ ಹೊಟೇಲನ್ನೇ ಬದಲಾಯಿಸಿದೆ.
ಫೈವ್ ಸ್ಟಾರ್ ಹೊಟೇಲ್‌ನಲ್ಲಿ ತಂಗಿದ್ದ ತಂಡಕ್ಕೆ ಅಂಬಾಟಿ ರಾಯುಡು ಮನೆಯಿಂದ ಬಿರಿಯಾನಿಯನ್ನು ಕಳುಹಿಸಿದ್ದರು. ಮನೆಯಿಂದ ಮಾಡಿದ ಬಿರಿಯಾನಿಯನ್ನು ತಿನ್ನಲ್ಲು ಕಾತುರದಿಂದ ಕಾಯುತ್ತಿದ್ದ ಚೆನ್ನೈ ತಂಡಕ್ಕೆ ಹೊಟೇಲ್ ಸಿಬ್ಬಂದಿ ಹೊರಗಡೆಯಿಂದ ತಂದ ಬಿರಿಯಾನಿಯನ್ನು ಕೊಂಡೊಯ್ಯಲು ಬಿಡದ ಕಾರಣ ಧೋನಿ ಮತ್ತವರ ತಂಡ ಹೊಟೇಲನ್ನೇ ಬದಲಿಸಿದ್ದಾರೆ.
ಚಾಂಪಿಯನ್ಸ್ ಲೀಗ್‌ನ ಉದ್ಘಾಟನಾ ಪಂದ್ಯ ಇದೇ ತಿಂಗಳ 17ರಂದು ಹೈದರಾಬಾದ್‌ನಲ್ಲಿ ನಡೆದಿತ್ತು. ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಚೆನ್ನೈ ಸೆಣೆಸಲಿತ್ತು. ಈ ವೇಳೆ ಅಂಬಾಟಿ ರಾಯುಡು ತಮ್ಮ ನೆಟ್ಟಿನ ನಾಯಕ ಧೋನಿ ಹಾಗೂ ತಂಡಕ್ಕಾಗಿ ಮನೆಯಿಂದ ತಯಾರಿಸಿದ ಬಿರಿಯಾನಿಯನ್ನು ಕಳುಹಿಸಿದ್ದರು. ಆದರೆ ಚೆನ್ನೈ ತಂಡ ತಂಗಿದ್ದ ಗ್ರ್ಯಾಂಡ್ ಕಾಕತಿಯಾ ಹೊಟೇಲ್ ಸಿಬ್ಬಂದಿ ಇದಕ್ಕೆ ಅವಕಾಶ ನೀಡಿರಲಿಲ್ಲ.
ಮನೆಯಿಂದ ತಂದ ಬಿರಿಯಾನಿ ತಿನ್ನಲು ಅವಕಾಶ ನೀಡದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತವರ ತಂಡ ಗ್ರ್ಯಾಂಡ್ ಕಾಕತೀಯ ಹೊಟೇಲ್‌ನಿಂದ ತಾಜ್ ಕೃಷ್ಣಾ ಹೊಟೇಲ್‌ಗೆ ಸ್ಥಳಾಂತರಗೊಂಡಿತು.