ಸೆಮೀಸ್ಗೆ ಸಾನಿಯಾ ಜೋಡಿ
ಟೊಕಿಯೊ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಜತೆಗಾರ್ತಿ ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿಯು ಇಲ್ಲಿ ನಡೆಯುತ್ತಿರುವ ಟೊಕಿಯೊ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯಕ್ಕೆ ಪ್ರವೇಶಿಸಿದೆ.
ಗುರುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಜೋಡಿ, ತಮ್ಮ ಎದುರಾಳಿ ಮಾರ್ಟಿನಾ ಹಿಂಗಿಸ್ ಹಾಗೂ ಬೆಲಿಂಡಾ ಬೆಂಸಿಕ್ ಜೋಡಿಯನ್ನು 6-4, 6-2 ನೇರ ಸೆಟ್ಗಳ ಅಂತರದಲ್ಲಿ ಮಣಿಸಿದೆ.
62 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿ, ಆರಂಭದಿಂದ ಅಂತ್ಯದವರೆಗೂ ಎದುರಾಳಿ ಮೇಲೆ ಪ್ರಭುತ್ವ ಸಾಧಿಸಿ ಸುಲಭ ಗೆಲುವು ದಾಖಲಿಸಿತು.