ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಂಚಿಗೇ ವನಿತೆಯರ ಶಟಲ್

ಕಳೆದ 28 ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ...

Mainashree
Updated On : 22 Sept 2014, 10:34 am

ಇಂಚಾನ್: ಕಳೆದ 28 ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತ ಪದಕ ಗೆದ್ದುಕೊಂಡಿಲ್ಲ ಎಂಬ ಬರ ನೀಗಿದೆ.

ಭಾನುವಾರ ನಡೆದ ಸೈಮಿಫೈನಲ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧ ಸೋಲನುಭವಿಸಿದ ಭಾರತ ವನಿತೆಯರ ತಂಡ ಕಂಚಿಗೆ ತೃಪ್ತಿಪಟ್ಟಿತು.

ಇದರೊಂದಿಗೆ ಭಾರತ ಬ್ಯಾಡ್ಮಿಂಟನ್ ತಂಡ 1974ರಲ್ಲಿ ತೆಹ್ರಾನ್‌ನನಲ್ಲಿ 1, 1982ರಲ್ಲಿ ಭಾರತದಲ್ಲಿ 5 ಹಾಗೂ 1986ರಲ್ಲಿ ಸಿಯೋಲ್‌ನಲ್ಲಿ 1 ಪದಕ ಗೆದ್ದ ನಂತರ ಇದೇ ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಪದಕದ ಖಾತೆ ತೆರೆದಿದೆ.

ಅಲ್ಲದೆ, ಭಾರತದ ವನಿತೆಯರ ತಂಡ ವಿಭಾಗದಲ್ಲಿ ಗೆದ್ದುಕೊಂಡಿರುವ ಎರಡನೇ ಪದಕ ಇದಾಗಿದೆ. ಈ ಮುನ್ನ 32 ವರ್ಷಗಳ ಹಿಂದೆ ತವರಿನಲ್ಲಿ ಒಂದು ಕಂಚಿನ ಪದಕ ಗೆದ್ದುಕೊಂಡಿತ್ತು. ಆದರೆ, ಪಂದ್ಯಾವಳಿಯಲ್ಲಿ ಭಾರತ ಇದುವರೆಗೂ ಚಿನ್ನ ಅಥವಾ ಬೆಳ್ಳಿಯನ್ನು ಗೆದ್ದುಕೊಂಡಿಲ್ಲ.

ಮೊದಲ ಪಂದ್ಯದಲ್ಲಿ ಸೈನಾ ನೆಹಾಲ್ ಅವರು ಗೆಲ್ಲುವ ಮೂಲಕ ಶುಭವರಾಂಭ ಮಾಡಿದ್ದರು. ಆದರೆ, ನಂತರ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ ವನಿತೆಯರು 1-3 ಅಂತರದಿಂದ ಕೈ ಚೆಲ್ಲಿದರು.

ಮೊದಲ ಪಂದ್ಯದಲ್ಲಿ ಸೈನಾ ಆತಿಥೇಯ ತಂಡದ ಜಿ ಹುನ್ ಸಿಂಗ್ ವಿರುದ್ಧ 21-12, 10-21, 2-19 ಗೇಮ್‌ಗಳಿಂದ ಜಯ ಸಾಧಿಸಿದರು. ನಂತರದ ಪಂದ್ಯದಲ್ಲಿ ಪಿ.ವಿ ಸಿಂಧು ಅವರು ವಿಶ್ವದ 6ನೇ ನಂಬರ್ ಆಟಗಾರ್ತಿ ವಿರುದ್ಧ 21-14, 21-18,21-13 ಗೇಮ್‌ಗಳಿಂದ ಸೋಲನುಭವಿಸಿದರು. ನಂತರ ಡಬಲ್ಸ್ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರದ್ನ್ಯಾಗಾರ್ಡೆ ಜೋಡಿ ಸೋಲನುಭವಿಸಿದರೆ, ಅಂತಿಮ ಮತ್ತು ಮೂರನೇ ಸಿಂಗಲ್ಸ್ ಪಂದ್ಯದಲ್ಲಿ ಪಿ.ಸಿ ತುಳಸಿ ಸಹ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement