ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಕ್ವಾಷ್: ಪಂದ್ಯ ಸೋತರೂ ಕಂಚು ಗೆದ್ದುಕೊಂಡ ದೀಪಿಕಾ

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ದೀಪಿಕಾ ಪಲ್ಲಿಕಲ್ ಅವರು ಕಂಚಿನ ಪದಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ
Mainashree
Updated On : 22 Sept 2014, 2:21 am

ಇಂಚಾನ್: ದಕ್ಷಿಣ ಕೋರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದ್ದು, ಸ್ಕ್ವಾಷ್‌ನಲ್ಲಿ ದೀಪಿಕಾ ಪಲ್ಲಿಕಲ್ ಅವರು ಕಂಚಿನ ಪದಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಕ್ವಾಷ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಮೊದಲ ಶ್ರೇಯಾಂಕಿತ ಆಟಗಾರ್ತಿ ನಿಕೋಲ್ ಡೇವಿಡ್ ಅವರ ವಿರುದ್ಧ 12 ಶ್ರೇಯಾಂಕಿತ ಆಟಗಾರ್ತಿಯಾದ ದೀಪಿಕಾ ಪಲ್ಲಿಕಲ್ ಅವರು ಪರಾಭವಗೊಂಡಿದ್ದು, 4-11, 4-11 ಮತ್ತು 5-11 ನೇರಸೆಟ್‌ಗಳಿಂದ ಪರಾಭವಗೊಂಡರು. ಪಂದ್ಯ ಸೋತರೂ ಭಾರತಕ್ಕೆ ಪದಕ ಗಟ್ಟಿಸಿಕೊಡುವಲ್ಲಿ ದೀಪಿಕಾ ಯಶಸ್ವಿಯಾಗಿದ್ದು, ಸ್ಕ್ವಾಷ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಲಭಿಸಿದೆ.

ಬೆಳ್ಳಿ ಪದಕ ಖಚಿತ ಪಡಿಸಿದ ಘೋಷಾಲ್
ಇನ್ನು ಪುರುಷರ ಸ್ಕ್ವಾಷ್ ವಿಭಾಗದಲ್ಲಿ ಭಾರತದ ಸೌರವ್ ಘೋಷಾಲ್ ಅವರಿಗೆ ಬೆಳ್ಳಿ ಪದಕ ಖಚಿತವಾಗಿದ್ದು, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌರವ್ ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಸೌರವ್ ಘೋಷಾಲ್ ಅವರು ಮಲೇಷ್ಯಾದ ಆಂಗ್‌ಬೆಂಗ್ ಅವರನ್ನು 11-9, 11-4, 11-5 ಸೆಟ್‌ಗಳಿಂದ ಪರಾಭವಗೊಳಿಸಿದ್ದಾರೆ. ಆ ಮೂಲಕ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಲಿ ಪ್ರವೇಶಿಸಿದ್ದಾರೆ.

ಚಿನ್ನದ ಪದಕದ ಮೇಲೆ ಕಣ್ಣಿಟ್ಟಿರುವ ಸೌರವ್ ಘೋಷಾಲ್ ಅವರು, ಫೈನಲ್‌ನಲ್ಲಿ ಸೋತರೂ ಭಾರತಕ್ಕೆ ಬೆಳ್ಳಿ ಪದಕ ಗಳಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement