ವೃತ್ತಿಪರ ಶೂಟಿಂಗ್‌ಗೆ ಬಿಂದ್ರಾ ವಿದಾಯ
ಭಾರತದ ಶೂಟಿಂಗ್ ಐಕಾನ್ ಎಂದೇ ಬಿಂಬಿತರಾಗಿರುವ ಅಭಿನವ್ ಬಿಂದ್ರಾ...
ನವದೆಹಲಿ: ಭಾರತದ ಶೂಟಿಂಗ್ ಐಕಾನ್ ಎಂದೇ ಬಿಂಬಿತರಾಗಿರುವ ಅಭಿನವ್ ಬಿಂದ್ರಾ ವೃತ್ತಿಪರ ಶೂಟಿಂಗ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ.
ಸದ್ಯ ಇಂಚಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಬಿಂದ್ರಾ ಮಂಗಳವಾರ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ತಮ್ಮ ನಿರ್ಧಾರವನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿರುವ ಬಿಂದ್ರಾ, ನಾಳೆ ನನ್ನ ವೃತ್ತಿಪರ ಶೂಟಿಂಗ್ ಬದುಕಿನ ಕೊನೆಯ ಗಳಿಗೆಯಾಗಲಿದೆ. ಆದರೂ ನಾನು ವಾರಕ್ಕೆ ಎರಡು ಬಾರಿ ಅಭ್ಯಾಸ ಮಾಡುತ್ತಾ ಹವ್ಯಾಸಿ ಶೂಟರ್ ಆಗಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಬಿಂದ್ರಾ ಅವರು ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮುನ್ನವೇ ಏಷ್ಯನ್ ಕ್ರೀಡಾಕೂಟದ ನಂತರ ವೃತ್ತಿಪರ ಶೂಟಿಂಗ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದರು.
ಬಿಂದ್ರಾ ಅವರು ನಿವೃತ್ತಿ ಪಡೆದುಕೊಂಡಿದ್ದರೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಇನ್ನು 2010ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಿಂದ್ರಾ, ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಯಶಸ್ಸಿನ ವೃತ್ತಿಜೀವನಕ್ಕೆ ಅದ್ಧೂರಿ ವಿದಾಯ ಹೇಳುವ ನಿರೀಕ್ಷೆ ಇದೆ.