ಕಂಚು ತಂದ ಸನಾಥೋಯಿ, ನರೇಂದ್ರ
ಭಾರತದ ವುಶು ಆಟಗಾರರಾದ ಸನಾಥೋಯಿ ದೇವಿ ಹಾಗೂ ನರೇಂದ್ರ...
ಭಾರತದ ವುಶು ಆಟಗಾರರಾದ ಸನಾಥೋಯಿ ದೇವಿ ಹಾಗೂ ನರೇಂದ್ರ ಗ್ರೆವಾಲ್ ಏಷ್ಯನ್ ಕ್ರೀಡಾಕೂಟದ ಸೆಮಿಫೈನಲ್ನಲ್ಲಿ ಸೋಲನುಭವಿಸಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸ್ಯಾಂಡಾ 52 ಕೆ.ಜಿ ವಿಭಾಗದ ಉಪಾಂತ್ಯದ ಪಂದ್ಯದಲ್ಲಿ ಸನಾಥೋಯಿ ಚೀನಾದ ಲುವಾನ್ ಜಂಗ್ ವಿರುದ್ಧ ಪರಾಭವಗೊಂಡರು. ಸನಾಥೋಯಿ ವಿರುದ್ಧ ಪ್ರಭುತ್ವ ಸಾಧಿಸಿದ ಚೀನಾ ಆಟಗಾರ್ತಿ 2-0 ಅಂತರದಿಂದ ಗೆಲವು ದಾಖಲಿಸಿದರು.
ಇನ್ನು ಪುರುಷರ ಸ್ಯಾಂಡಾ 60 ಕೆ.ಜಿ ವಿಭಾಗದಲ್ಲಿ ಸಕ್ಲಾಗ್ ಜೀನ್ ಕ್ಲೌಡೆ ವಿರುದ್ಧ 0-2 ಅಂತರದಿಂದ ಸೋಲನುಭವಿಸಿದರು. ಈ ಮೂಲಕ ಭಾರತಕ್ಕೆ ವುಶು ಕ್ರೀಡೆಯಿಂದ 2 ಪದಕ ದೊರೆತಂತಾಗಿದೆ.