ಏಷ್ಯನ್ ಗೇಮ್ಸ್: ತ್ರಿಷಾ ದೇಬ್‌ಗೆ ಎರಡನೇ ಕಂಚು
ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ವೈಯಕ್ತಿಕ ಆರ್ಚರಿ ವಿಭಾಗದಲ್ಲಿ ಭಾರತದ ತ್ರಿಷಾ ದೇಬ್ ಅವರು ಎರಡನೇ ಕಂಚಿಕೆ ...
ಇಂಚಾನ್: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದ ವೈಯಕ್ತಿಕ ಆರ್ಚರಿ ವಿಭಾಗದಲ್ಲಿ ಭಾರತದ ತ್ರಿಷಾ ದೇಬ್ ಅವರು ಎರಡನೇ ಕಂಚಿಕೆ ಮುತ್ತಿಟ್ಟಿದ್ದಾರೆ.
ಶನಿವಾರ ನಡೆದ ಮಹಿಳಾ ಕಂಪೌಂಡ್ ಆರ್ಚರಿ ವೈಯಕ್ತಿಕ ವಿಭಾಗದಲ್ಲಿ ತ್ರಿಷಾ ದೇಬ್ ಅವರು 138-134ರಲ್ಲಿ ಎದುರಾಳಿ ಚೀನಾದ ತೈಪೆ'ಸ್ ಹುವಾಂಗ್‌ರನ್ನು ಮಣಿಸಿದ್ದಾರೆ.
ಭಾರತದ ಕಂಪೌಂಡ್ ಮಹಿಳಾ ತಂಡವೂ ಪದಕ ಪಡೆಯುವಲ್ಲಿ ಹಿಂದೆ ಬೀಳಲಿಲ್ಲ. ತ್ರಿಷಾ ದೇಬ್, ಪೂರ್ವಶಿಂಧೆ ಹಾಗೂ ಜ್ಯೋತಿ ಸುರೇಖಾ ವರ್ಮಾ ಅವರನ್ನೊಳಗೊಂಡ ತಂಡವು 224-217ರಲ್ಲಿ ಎದುರಾಳಿ ಇರಾನ್ ಸ್ಪರ್ಧಿಗಳನ್ನು ಪರಾಭವಗೊಳಿಸಿ ಕಂಚಿನ ನಗು ಬೀರಿತು.