ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಥ್ಲೆಟಿಕ್ಸ್‌ನಲ್ಲಿ ರಾಜ್ಯದ ಪೂವಮ್ಮ ಕಂಚಿನ ಬೇಟೆ

ಭಾನುವಾರ ನಡೆದ ಮಹಿಳೆಯರ 400 ಮೀ. ಓಟದ ಫೈನಲ್ ಸುತ್ತಿನಲ್ಲಿ ಕರ್ನಾಟಕದ ಓಟಗಾರ್ತಿ ಪೂವಮ್ಮ ಅವರು ....

Rashmi Kasaragodu
Updated On : 29 Sept 2014, 11:32 am

ಭಾನುವಾರ ನಡೆದ ಮಹಿಳೆಯರ 400 ಮೀ. ಓಟದ ಫೈನಲ್ ಸುತ್ತಿನಲ್ಲಿ ಕರ್ನಾಟಕದ ಓಟಗಾರ್ತಿ ಪೂವಮ್ಮ ಅವರು 52..36 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಮೂರನೇ ಸ್ಥಾನವನ್ನು ಪಡೆದು ಕಂಚಿನ ಹಾರಕ್ಕೆ ಭಾಜನರಾದರು. ಇನ್ನು ಬಹರೈನ್‌ನ ಒಲುವಕಿಮಿ ಮುಜಿದತ್(51.49 ಸೆ) ಚಿನ್ನದ ಪದಕ ಪಡೆದರೆ, ವಿಯೆಟ್ನಾಂನ ತಿ ಲನ್ ಕ್ವಾಚ್ (52.06 ಸೆ) ಬೆಳ್ಳಿ ಪದಕ ಪಡೆದರು. ಪ್ರಸಕತ್ ಭಾರತದಲ್ಲಿ ಪ್ರಮುಖ ಓಟಗಾರರಲ್ಲಿ ಒಬ್ಬರಾಗಿರುವ ರಾಜ್ಯದ ಪೂವಮ್ಮ ಅವರ ಮೇಲೆ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆಯುವಲ್ಲಿ ಎಡವಿದ್ದರು. ಏಷ್ಯಾದಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ 2ನೇ  ರ್ಯಾಂಕಿಂಗ್ ಪಡೆದಿರುವ ಪೂವಮ್ಮ, ಈ ಬಾರಿ ಪದಕ ಪಡೆಯುವಲ್ಲಿ ಯಶಸ್ವಿಯಾದರು. ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 4/100ಮಿಡ್ಲೆ ರಿಲೆ ಹಾಗೂ 400 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದರು. 2008ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 4/100 ಮಿಡ್ಲೆ ರಿಲೆ ಹಾಗೂ 400 ಮೀ. ಓಟದಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಬಾಚಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement