ಚಿನ್ನದ ಪಂಚ್ ನಿರೀಕ್ಷೆ: ಫೈನಲ್ಗೆ ಮೇರಿಕೋಮ್
17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್ ಪಟು ಎಂ.ಸಿ. ಮೆರಿಕೋಮ್ ಫೈನಲ್ಗೆ ಪ್ರವೇಶಿಸಿದ್ದಾರೆ...
ಇಂಚಾನ್: 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸಿಂಗ್ ಪಟು ಎಂ.ಸಿ. ಮೆರಿಕೋಮ್ ಫೈನಲ್ಗೆ ಪ್ರವೇಶಿಸಿದ್ದಾರೆ. ಮಹಿಳೆಯರ ಫ್ಲೈವೈಟ್(48-51 ಕೆ.ಜಿ) ವಿಭಾಗದ ಸೆಮಿಫೈನಲ್ನಲ್ಲಿ ಮಂಗಳವಾರ ವಿಯೆಟ್ನಾಂನ ಲಿ ಥೀ ಬಾಂಗ್ ಅವರನ್ನು 3-0 ಅಂತರದಲ್ಲಿ ಸೋಲಿಸಿ ಮೇರಿಕೋಮ್ ಅಂತಿಮ ಸುತ್ತಿನ ಸ್ಪರ್ಧೆಗೆ ತಲುಪಿದ್ದಾರೆ.
5 ಬಾರಿ ವಿಶ್ವ ಚಾಂಪಿಯನ್ ಆಗಿರುವ 31ರ ಹರೆಯದ ಮೇರಿಕೋಮ್ ಈ ಬಾರಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸುತ್ತಾರೆ ಎಂಬ ನಿರೀಕ್ಷೆ ಭಾರತೀಯರದ್ದು. ಆಲ್ ದ ಬೆಸ್ಟ್ ಮೇರಿಕೋಮ್...