ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಾನಿಯಾ-ಸಾಕೇತ್‌ಗೆ ಚಿನ್ನ

17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಯಶಸ್ವಿಯಾಗಿ...

Lingaraj Badiger
Updated On : 30 Sept 2014, 10:42 am

ಇಂಚಾನ್: 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಯಶಸ್ವಿಯಾಗಿ ಮುಂದುವರಿದಿದ್ದು, ಸೋಮವಾರ ಹತ್ತನೇ ದಿನ ಟೆನಿಸ್ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಜಾ ಮತ್ತು ಸಾಕೇತ್ ಮೈನೇನಿ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಮಹತ್ಸಾಧನೆ ಮಾಡಿದ್ದಾರೆ.

ಇಂದು ನಡೆದ ಚಿನ್ನದ ಪದಕ್ಕಾಗಿನ ಬೇಟೆಯಲ್ಲಿ ಸಾನಿಯಾ ಮತ್ತು ಸಾಕೇತ್ 6-4, 6-3 ನೇರ ಸೆಟ್‌ಗಳಿಂದ ಟೈನೀಸ್ ತೈಪೇನ ಸೀನ್ ಪೆಂಗ್ ಮತ್ತು ಹಾವೋ ಚಿಂಗ್ ಜೋಡಿಯ ವಿರುದ್ಧ ಅದ್ಭುತ ಗೆಲವು ದಾಖಲಿಸಿದರು. ಆ ಮೂಲಕ ಭಾರತಕ್ಕೆ 6ನೇ ಚಿನ್ನದ ಪದಕ ಗೆದ್ದುಕೊಟ್ಟ ಸಾಧನೆ ಇವರದಾಯಿತು.

ಮುಖ್ಯವಾಗಿ ಸಾನಿಯಾ ತಮ್ಮ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಒಟ್ಟಾರೆ 9ನೇ ಪದಕ ಗೆದ್ದ ಸಾಧನೆ ಮಾಡಿದರು. ಇದೇ ಕೂಟದಲ್ಲಿ ಅವರು ಪ್ರಾರ್ಥನಾ ಜೊತೆಗೂಡಿ ಮಹಿಳೆಯರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಎರಡನೇ ಶ್ರೇಯಾಂಕಿತ ಜೋಡಿಯಾದ ಸಾನಿಯಾ-ಸಾಕೇತ್ ಎರಡೂ ಸೆಟ್‌ಗಳಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸುವ ಮೂಲಕ ಸುಮಾರು ಒಂದೂವರೆ ಗಂಟೆ ಆಟದಲ್ಲಿ ಗೆಲುವಿನ ಕೇಕೆ ಹಾಕುವ ಮೂಲಕ ಚಿನ್ನದ ಪದಕದ ಮೇಲೆ ತಮ್ಮ ಮೊಹರು ಒತ್ತಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement