ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಗೇಮ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಕಂಚು

ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ...

Vishwanath S
Updated On : 1 Oct 2014, 4:19 am

ಇಂಚಾನ್: ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಹಾಕಿ ತಂಡ ಭಾರತಕ್ಕೆ ಕಂಚು ತಂದುಕೊಟ್ಟಿದ್ದಾರೆ.

ಇಂದು ನಡೆದ ಜಪಾನ್ ವಿರುದ್ಧದ ಪಂದ್ಯದಲ್ಲಿ ಜಸ್ಪೀತ್ ಕೌರ್ ಹಾಗೂ ವಂದನ ಕಯಾರಿಯ ಅವರು ತಲಾ ಒಂದು ಗೋಲ್ ದಾಖಲಿಸಿದ್ದು, ಭಾರತಕ್ಕೆ ಕಂಚಿನ ಪದಕ ಸಿಕ್ಕಿದೆ. ಜಪಾನ್‌ನೊಂದಿಗಿನ ನಾಲ್ಕು ಪಂದ್ಯಗಳ ಪೈಕಿ ಇದೇ ಮೊದಲ ಬಾರಿಗೆ ಜಪಾನ್ ತಂಡವನ್ನು ಭಾರತೀಯ ಮಹಿಳೆಯರ ತಂಡ ಮಣಿಸಿದೆ.

ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದು, ಪಂದ್ಯ ಡ್ರಾ ಆಗುವ ಸಾಧ್ಯತೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ವಂದನ ಅವರು ಗೋಲು ಹೊಡೆಯುವ ಮೂಲಕ ಭಾರತ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement