Image credit: Getty Images 
ಕ್ರೀಡೆ

ರೈನಾ ಮದುವೆಗೆ ಧೋನಿ ಕುಟುಂಬ, ವಿರಾಟ್-ಅನುಷ್ಕಾ ಸೇರಿ ಹಲವು ಗಣ್ಯರು ಸಾಕ್ಷಿ

ಕ್ರಿಕೆಟಿಗ ಸುರೇಶ್ ರೈನಾ ಅವರು ಇಂದು ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಅವರೊಂದಿಗೆ ಹಸೆಮಣೆ ಏರುತ್ತಿದ್ದಾರೆ.

ನವದೆಹಲಿ: ಕ್ರಿಕೆಟಿಗ ಸುರೇಶ್ ರೈನಾ ಅವರು ಇಂದು ತಮ್ಮ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧರಿ ಅವರೊಂದಿಗೆ ಹಸೆಮಣೆ ಏರುತ್ತಿದ್ದಾರೆ.

ಸುರೇಶ್ ರೈನಾ ಮತ್ತು ಪ್ರಿಯಾಂಕಾ ಅವರ ನಿಶ್ಚಿತಾರ್ಥ ಬುಧವಾರ ನಡೆದಿದ್ದು, ಇಂದು ದೆಹಲಿಯ ಐಶಾರಾಮಿ ಹೋಟೆಲ್ ಲೀಲಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆಯುತ್ತಿದೆ. ಈ ಸಮಾರಂಭಕ್ಕೆ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಲ್ಲಾ ಆಟಗಾರರು ಹಾಗೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.

ಪ್ರಸ್ತುತ ಪ್ರಿಯಾಂಕಾ ಅವರು ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು, ನೆದರ್ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದಾರೆ. ವಿವಾಹದ ಬಳಿಕ ಭಾರತದಲ್ಲೇ ನೆಲೆಸಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಮೀರತ್‍ನಲ್ಲಿರುವ ರೈನಾ ಹಾಗೂ ಪ್ರಿಯಾಂಕಾ ತಂದೆ-ತಾಯಂದಿರು ಪರಸ್ಪರ ಆಪ್ತರಾಗಿರುವುದು ಇವರಿಬ್ಬರ ವಿವಾಹಕ್ಕೆ ಸ್ನೇಹ ಸೇತುವಾಗಿದೆ. 6 ತಿಂಗಳ ಹಿಂದೆ ಭೇಟಿಯಾಗಿದ್ದ ಈ ಎರಡೂ ಕುಟುಂಬ ಸದಸ್ಯರು ರೈನಾ-ಪ್ರಿಯಾಂಕಾ ಅವರ ವಿವಾಹಕ್ಕೆ ನಾಂದಿ ಹಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!