ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ 
ಕ್ರೀಡೆ

ಫೈನಲ್ ಗೆ ಸಾನಿಯಾ ಹಿಂಗಿಸ್

ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ಫೈನಲ್ ..

ಮಿಯಾಮಿ (ಅಮೆರಿಕ): ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ಫೈನಲ್ ಪ್ರವೇಶಿಸುವುದರೊಂದಿಗೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಳ್ಳುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಟೂರ್ನಿಯ ಅಗ್ರಶ್ರೇಯಾಂಕಿತ ಜೋಡಿಯಾಗಿರುವ ಸಾನಿಯಾ ಮತ್ತು ಹಿಂಗಿಸ್, ಕಳೆದ ತಡರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಹಂಗರಿಯ ಟಿಮಿಯಾ ಬಾಬೊಸ್ ಮತ್ತು ಬ್ರೋರನ್ಸ್‍ನ ಕ್ರಿಸ್ಟಿನಾ ಮಾಡೆನೊವಿಚ್ ಅವರನ್ನು 6-2, 6-4 ನೇರ ಸೆಟ್ ಗಳಿಂದ ಪರಾಭವಗೊಳಿಸಿದರು.
ಸುಮಾರು ಒಂದು ಕಾಲು ಗಂಟೆ ನಡೆದ ಪಂದ್ಯದಲ್ಲಿ ಭಾರತ-ಸ್ವಿಸ್ ಜೋಡಿ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ಏಳನೇ ಶ್ರೇಯÁಂಕಿತ ಎದುರಾಳಿ
ಜೋಡಿಗೆ ಎಚ್ಚೆತ್ತುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸಾನಿಯಾ  ಮತ್ತು ಹಿಂಗಿಸ್, ರಷ್ಯಾದ ಏಕಟರಿನಾ ಮಕಾರೊವಾ ಮತ್ತು ಎಲೆನಾ ವೆಸ್ನಿನಾ ಅವರನ್ನು ಎದುರಿಸಲಿದ್ದಾರೆ. ಮಕಾರೊವಾ ಮತ್ತು ವೆಸ್ನಿನಾ, ತಮ್ಮ ಸೆಮಿಫೈನಲ್ ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಜೋಡಿ ಆ್ಯಂಡ್ರಿಯಾ  ಹಾವಾಕೊವಾ ಮತ್ತು ಲೂಸಿ ಹಾರ್ದಿಕಾ ಅವರನ್ನು 6-4, 6-2 ನೇರ ಸೆಟ್‍ಗಳಿಂದ ಪರಾಭವಗೊಳಿಸಿದರು.
ಈಗಾಗಲೇ ಎರಡು ವಾರಗಳ ಹಿಂದೆ ಬಿಎನ್‍ಪಿ ಪಾರಿಬಸ್ ಓಪನ್ ಟೂರ್ನಿಯಲ್ಲಿ ಇದೇ ಏಕಟರಿನಾ ಮತ್ತು ಎಲೆನಾ ಜೋಡಿಯನ್ನು  ಫೈನಲ್‍ನಲ್ಲೇ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದ್ದ ಸಾನಿಯಾ  ಮತ್ತು ಹಿಂಗಿಸ್, ಈಗ ಮತ್ತೊಂದು ಸಾಧನೆಯ ಹಾದಿಯಲ್ಲಿದ್ದಾರೆ.
ಸಾನಿಯಾ  ಅಭಿಮತ: ಕಳೆದ ಬಾರಿ ರಷ್ಯಾ ಜೋಡಿಯ ವಿರುದ್ಧ ತೋರಿದ್ದ ಪ್ರದರ್ಶನವನ್ನೇ ಈ ಸಲದ ಫೈನಲ್‍ನಲ್ಲೂ ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಹೊಂದಿದ್ದೇವೆ. ಆದರೆ, ಹಿಂದಿನ ಪ್ರದರ್ಶನವನ್ನೇ ನಂಬಿಕೂರುವ ಹಾಗಿಲ್ಲ. ಪ್ರತಿ ಪಂದ್ಯವೂ ಹೊಸತು. ಹಾಗಾಗಿ, ಎಚ್ಚರಿಕೆಯಿಂದಲೇ ಏಕಟರಿನಾ ಮತ್ತು ಎಲೆನಾ ಅವರನ್ನು ಎದುರಿಸಬೇಕಾಗಿದೆ ಎಂದು ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!