ಕ್ರೀಡೆ

ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಅಪೂರ್ವಿ

Vishwanath S

ನವದೆಹಲಿ: ಭಾರತದ ಮಹಿಳಾ ಶೂಟರ್‌ ಅಪೂರ್ವಿ ಚಾಂದೇಲಾ ಅವರು ಮುಂದಿನ ವರ್ಷ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.

ಕೊರಿಯಾದ ಚಾಂಗವನ್‌ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ 10 ಮೀಟರ್ ಏರ್‌ ರೈಫೆಲ್‌ ವಿಭಾಗದಲ್ಲಿ ಕಂಚಿನ ಸಾಧನೆ ತೋರಿದರು. ಈ ಮೂಲಕ 2016ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಟೂರ್ನಿಯಲ್ಲಿ ಕೊನೆಯ ಸುತ್ತಿಗೆ ಎಂಟು ಜನರ ಪಟ್ಟಿಯಲ್ಲಿ ಐದನೇಯವರಾಗಿ ಅರ್ಹತೆ ಪಡೆದ ಅಪೂರ್ವಿ ಅವರು, 185.6 ಪಾಯಿಂಟ್‌ಗಳನ್ನು ಕಲೆಹಾಕಿ ಮೂರನೇ ಸ್ಥಾನ ಪಡೆದರು. ಈ ಎಂಟರ ಪೈಕಿ ಮೊದಲ ಆರು ಸ್ಥಾನ ಪಡೆದವರಿಗೆ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ದೊರೆಯುತ್ತದೆ.

SCROLL FOR NEXT