ಪಿ.ಕಶ್ಯಪ್ 
ಕ್ರೀಡೆ

ಸಿಂಗಾಪುರ ಓಪನ್: ಸೆಮೀಸ್‍ನಲ್ಲಿ ಕಶ್ಯಪ್‍ಗೆ ಸೋಲು

ಭಾರತದ ಪರುಪಳ್ಳಿ ಕಶ್ಯಪ್, 3 ಲಕ್ಷ ಡಾಲರ್ ಬಹುಮಾನ ಮೊತ್ತದ ಸಿಂಗಾಪುರ ಓಪನ್ ಸನ್‍ರೈಸರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ...

ಸಿಂಗಾಪುರ: ಭಾರತದ ಪರುಪಳ್ಳಿ ಕಶ್ಯಪ್, 3 ಲಕ್ಷ ಡಾಲರ್ ಬಹುಮಾನ ಮೊತ್ತದ ಸಿಂಗಾಪುರ ಓಪನ್ ಸನ್‍ರೈಸರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸೋತು ಪ್ರಶಸ್ತಿಯ ಆಸೆ ಕೈಬಿಟ್ಟಿದ್ದಾರೆ.

ವಿಶ್ವದ 15ನೇ ಶ್ರೇಯಾಂಕಿತ ಆಟಗಾರ ಕಶ್ಯಪ್, 22-20, 11-21, 14-21 ಗೇಮïಗಳಿಂದ ಹಾಂಕಾಂಗ್‍ನ ಹೂ ಯುನ್ ವಿರುದ್ಧ ತಲೆಬಾಗಿಸಿದರು. ಸಿಂಗಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಲ್ಕರಘಟ್ಟದ ಸೆಣಸಿನಲ್ಲಿ ವಿಶ್ವದ 13ನೇ ಶ್ರೇಯಾಂಕಿತ ಹಾಂಕಾಂಗ್ ಆಟಗಾರ, 58 ನಿಮಿಷಗಳ ಹೋರಾಟದ ಬಳಿಕ ಅಂತಿಮ ಗೆಲವು ದಾಖಲಿಸಿದರು. ಆ ಮೂಲಕ ಹೈದರಾಬಾದ್‍ನ ಕಶ್ಯಪ್ ವಿರುದ್ಧದ ಈವರೆಗಿನ ಮುಖಾಬಲದಲ್ಲಿ ಹೂ ಯುನ್ ಅವರು ಗೆಲವಿನ ಅಂತರವನ್ನು 3-1ಕ್ಕೆ ವಿಸ್ತರಿಸಿಕೊಂಡರು.

ಕಶ್ಯಪ್ ಮತ್ತು ಹೂ ಯುನ್ ನಡುವಿನ ಹೋರಾಟ ಮೊದಲ ಗೇಮ್ ನಲ್ಲಿ ರೋಚಕವಾಗಿತ್ತು. ನಾ ಮುಂದು ತಾ ಮುಂದು ಎಂಬಂತೆ ಮುನ್ನುಗ್ಗಿದ ಈ ಆಟಗಾರರ ಪೈಕಿಯಾರು ಗೆಲ್ಲಬಹುದೆಂದು ಕೊನೆಯವರೆಗೂ ಹೇಳುವುದು ಕಷ್ಟವಾಗಿತ್ತು. ಆದರೆ, ಅಂತಿಮವಾಗಿ ಭಾರತೀಯ ಅಟಗಾರ ಮೊದಲ ಗೇಮ್ ತನ್ನ ವಶಕ್ಕೆ ತೆಗೆದುಕೊಂಡು ಪಂದ್ಯದಲ್ಲಿ ಶುಭಾರಂಭ ಮಾಡಿದರು. ಆದರೆ, ನಂತರದ ಎರಡು ಗೇಮ್ ಗಳಲ್ಲಿ ಹಾಂಕಾಂಗ್ ಆಟಗಾರ ನೀಡಿದ ಭಾರಿ ತಿರುಗೇಟಿನ ಮುಂದೆ ಕಶ್ಯಪ್ ಬಳಿ ಉತ್ತರವೇ ಇರಲಿಲ್ಲ. ಎರಡನೇ ಗೇಮ್ ಅನ್ನು 21-11ರಿಂದ ಸುಲಭವಾಗಿ ಗೆದ್ದು, ಭಾರತದ ಆಟಗಾರನ ಜೊತೆ ಸಮಗೌರವ ಸಾಧಿಸಿದ ಹೂ ಯು, ಇದೇ ಸೂ#ರ್ತಿಯಲ್ಲಿ ನಿರ್ಣಾಯಕ ಮೂರನೇ ಗೇಮïನಲ್ಲಿ ಸಹ ಆಕ್ರಮಣಕಾರಿ ಆಟ ಮುಂದುವರಿಸಿ ಪಂದ್ಯವನ್ನು ತಮ್ಮ ವಶಕ್ಕೆ ಪಡೆಯುವ ಮೂಲಕ ಫೈನಲ್‍ಗೆ ಹೆಜ್ಜೆ ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

SCROLL FOR NEXT