ಚಾರ್ಲ್ಸ್‌ಟನ್: ಭಾರತ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಫ್ಯಾಮಿಲಿ ಸರ್ಕಲ್ ಕಪ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತಿ ಹಿಂಗಿಸ್ ಜೋಡಿ 6-0, 6-4 ನೇರ ಸೆಟ್‌ಗಳಿಂದ ಆಸ್ಟ್ರೇಲಿಯಾದ ಕ್ಯಾಸಿ ಡೆಲಾಕ್ವಾ ಮತ್ತು ಕ್ರೊವೇಷಿಯಾದ ಡಾರಿಜಾ ಜುರಾಕ್ ಅವರನ್ನು ಫರಾಭವಗೊಳಿಸಿ ಈ ಸಾಧನೆ ಮಾಡಿದರು. ಈ ಪ್ರಶಶ್ತಿಯು ಸಾನಿಯಾ-ಹಿಂಗಿಸ್ ಜೋಡಿಗೆ ಲಭಿಸಿದ ಸತತ 3ನೇ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಮೊದ ಬಾರಿಗೆ ವಿಶ್ವದ ನಂಬರ್ ಒನ್ ಆಟಗಾರ್ತಿಯ ಸ್ಥಾನ ಅಲಂಕಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸಾನಿಮಾ ಪಾತ್ರರಾಗಿದ್ದಾರೆ.
ಸಾನಿಯಾ ಮಿರ್ಜಾ ಅವರು ನಂಬರ್ ಒನ್ ಪಟ್ಟಕ್ಕೇರಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆಷ್ಟೇ.