ಕ್ರೀಡೆ

ಶಾಂಪೈನ್ ಸಿಂಪಡಿಸಿ ತೀವ್ರ ವಿರೋಧಕ್ಕೆ ತುತ್ತಾದ ಲ್ಯೂಯಿಸ್ ಹ್ಯಾಮಿಲ್ಟನ್

Guruprasad Narayana

ಶಾಂಘೈ: ಚೈನೀಸ್ ಗ್ರ್ಯಾಂಡ್ ಪ್ರಿಕ್ಸ್ ಫಾರ್ಮುಲಾ ಒನ್ ರೇಸ್ ಗೆದ್ದ ನಂತರ ಭಾನುವಾರ ಸಂಭ್ರಮದಲ್ಲಿ ಅಲ್ಲಿನ ಪರಿಚಾರಿಕೆಯ ಮೇಲೆ ಶಾಂಪೈನ್ ಸಿಂಪಡಿಸಿದ್ದಕ್ಕೆ ಫಾರ್ಮುಲಾ ಒನ್ ಚಾಲಕ ಲ್ಯೂಯಿಸ್ ಹ್ಯಾಮಿಲ್ಟನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ವಿಶ್ವದಾದ್ಯಂತ ಹಲವಾರು ಸೆಕ್ಸಿಸ್ಟ್ ವಿರೋಧಿ ಸಂಘಟನೆಗಳು ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿವೆ. ಈ ಚಾಲಕ ಹೀಗೆ ವರ್ತಿಸಿರುವುದು ಎರಡನೇ ಬಾರಿ.

ಲ್ಯೂಯಿಸ್ ಹ್ಯಾಮಿಲ್ಟನ್ ಅವರ ಸೆಕ್ಸಿಸ್ಟ್ ಧೋರಣೆಯನ್ನು ಖಂಡಿಸಿರುವ ಸಂಘಟನೆಗಳು ಅವರ ಕ್ಷಮಾಪಣೆಯನ್ನು ಕೋರಿವೆ.

SCROLL FOR NEXT