ಡೆಲ್ಲಿ ಡೇರ್ ಡೇವಿಲ್ಸ್ 
ಕ್ರೀಡೆ

ಯುವಿ ಅಬ್ಬರ, ಡೆವಿಲ್ಸ್​ಗೆ ಮೊದಲ ಜಯ

ಎಂಟನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮೊದಲ ಜಯದ ಸವಿ ಅನುಭವಿಸಿದೆ.

ಪುಣೆ: ಎಂಟನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮೊದಲ ಜಯದ ಸವಿ ಅನುಭವಿಸಿದೆ. ಕರ್ನಾಟಕದ ಆಟಗಾರ ಮಾಯಾಂಕ್ ಅಗರ್ವಾಲ್ ಹಾಗೂ ಯುವರಾಜ್ ಸಿಂಗ್ ಅದ್ಭುತ ಜತೆಯಾಟ ನಡೆಸಿ ಡೆವಿಲ್ಸ್ ವಿಜಯೋತ್ಸವಕ್ಕೆ ಕಾರಣರಾಗಿದ್ದಾರೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಡೇರ್ ಡೆವಿಲ್ಸ್ ಬಳಗ 5 ವಿಕೆಟ್ ಗಳ ಗೆಲವು ದಾಖಲಿಸಿತು. ಬೃಹತ್ ಮೊತ್ತವನ್ನು ಕಲೆಹಾಕುವ ನಿಟ್ಟಿನಲ್ಲಿ ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ 20 ಓವರ್ ಗಳಲ್ಲಿ 7 ವಿಕೆಟ್‍ಗೆ 165 ರನ್ ದಾಖಲಿಸಿತು.

ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ 19.5 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 169 ರನ್‍ಗಳಿಸಿ ನಿರೀಕ್ಷಿತ ಗೆಲವು ಪಡೆಯಿತು. ಈ ಮೂಲಕ ಆರಂಭಿಕ ಎರಡು ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಮೊದಲ ಬಾರಿಗೆ ಗೆಲವಿನ ಹಾದಿಗೆ ಬಂದಿತು. ಅಲ್ಲದೆ ಕಳೆದ ಆವೃತ್ತಿ ಸೇರಿದಂತೆ ಒಟ್ಟು 11 ಪಂದ್ಯಗಳ ನಂತರ ಡೆಲ್ಲಿ ಡೇರ್ ಡೆವಿಲ್ಸ್ ಪ್ರಥಮ ಗೆಲವಿನ ಸಿಹಿ ಸವಿದಂತಾಯಿತು.

ಮಿಂಚಿದ ಸೆಹವಾಗ್
ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆರಂಭಿಕ ವಿರೇಂದ್ರ ಸೆಹವಾಗ್ (47 ರನ್, 41 ಎಸೆತ, 4 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಆಸರೆಯಾದರು. ಸೆಹವಾಗ್ ಜತೆಗೆ ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ (19), ತಂಡಕ್ಕೆ ಮೊದಲ ವಿಕೆಟ್ ನಲ್ಲಿ 33 ರನ್‍ಗಳ ಸಾಧಾರಣ ಆರಂಭ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವೃದ್ಧಿಮಾನ್ ಸಾಹ (39), ಸೆಹವಾಗ್ ಜತೆಗೂಡಿ 2ನೇ ವಿಕೆಟ್‍ಗೆ ಅರ್ಧಶತಕದ (71) ಜತೆಯಾಟದೊಂದಿಗೆ ತಂಡದ ಇನಿಂಗ್ಸ್ ಅನ್ನು ಸುಸ್ಥಿತಿಯ ದಿಕ್ಕಿನತ್ತಕೊಂಡೊಯ್ದರು.

ಪಂದ್ಯದ ಮಹತ್ವದ ಹಂತದಲ್ಲಿ ಪಂಜಾಬ್ ತಂಡ ನಿರಂತರವಾಗಿ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಒತ್ತಡವನ್ನು ಮೈಮೇಲೆ ಎಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಮಿಲ್ಲರ್ (5), ಮ್ಯಾಕ್ಸ್ ವೆಲ್ (15), ಬೇಯ್ಲಿ (19) ಸ್ಫೋಟಕ ಬ್ಯಾಟಿಂಗ್ ನಡೆಸಿದರೂ ಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಸ್ಪಿನ್ ಜಾದು ಮಾಡಿದ ಇಮ್ರಾನ್ ತಾಹಿರ್ 3 ವಿಕೆಟ್ ಕಬಳಿಸಿದರು. ಈ ಮೂಲಕ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಮುಂದುವರಿದಿದ್ದಾರೆ. ಇನ್ನು ನಾಯಕ ಡುಮಿನಿ 2, ಆ್ಯಂಜೆಲೊ ಮ್ಯಾಥ್ಯೂಸ್
ಹಾಗೂ ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದರು.

ಮಾಯಾಂಕ್-ಯುವಿ ಮಿಂಚು
ಪಂಜಾಬ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಕರ್ನಾಟಕದ ಯುವ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್ವಾಲ್ ಹಾಗೂ ಯುವರಾಜ್ ಸಿಂಗ್ ಆಸರೆಯಾದರು. ಶ್ರೇಯಸ್ ಅಯ್ಯರ್ ಜತೆಗೆ ಇನಿಂಗ್ಸ್ ಆರಂಭಿಸಿದ ಮಾಯಾಂಕ್ ಇನಿಂಗ್ಸ್ ಕಟ್ಟುವತ್ತ ಗಮನ ಹರಿಸಿದರು. ಶ್ರೇಯಸ್ (6) ಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಡುಮಿನಿ 21 ರನ್ ಗಳಿಸಿದಾಗ ಅನಗತ್ಯವಾಗಿ ರನ್ ಕದಿಯಲು ಮುಂದಾಗಿ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಈ ವೇಳೆ ಮಾಯಾಂಕ್ ಜತೆಗೂಡಿದ ಯುವರಾಜ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. 3ನೇ ವಿಕೆಟ್‍ಗೆ ಈ ಜೋಡಿ ಶತಕದ ಜತೆಯಾಟ (106) ನೀಡುವ ಮೂಲಕ ತಂಡವನ್ನು ಗೆಲವಿನ ಹಾದಿಯಲ್ಲಿ ಸಾಗಿಸಿದರು. ಮಾಯಾಂಕ್ ಅಗರ್ವಾಲ್ 48 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರೆ, ಯುವರಾಜ್ ಸಿಂಗ್ 39 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 55 ರನ್ ಕಲೆ ಹಾಕಿದರು. ಯುವರಾಜ್ ಮತ್ತು ಮಾಯಾಂಕ್ ಒಂದೇ ಮೊತ್ತದಲ್ಲಿ ಕ್ರಮವಾಗಿ ಪೆವಿಲಿಯನ್ ಸೇರಿದರು. ಆದರೆ ಆಗ ಡೆಲ್ಲಿ ತಂಡಕ್ಕೆ ಗೆಲ್ಲಲು 9 ಎಸೆತಗಳಲ್ಲಿ ಕೇವಲ 7 ರನ್‍ಗಳ ಅಗತ್ಯವಿದ್ದಿದ್ದರಿಂದ ಇದು ತಂಡದ ಮೇಲೆ ಪರಿಣಾಮ ಬೀರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ