ಕೋಲ್ಕತ್ತ: ೧೯ರೊಳಗಿನ ಕ್ರಿಕೆಟ್ ತಂಡದ ಮಾಜಿ ನಾಯಕ ಅಂಕಿತ್ ಕೇಸರಿ ಪ್ರಾದೇಶಿಕ ಪಂದ್ಯವೊಂದರ ವೇಳೆ ತಲೆಗೆ ಬಿದ್ದ ಏಟಿನಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಶುಕ್ರವಾರ ನಡೆದ ಪಂದ್ಯವೊಂದರಲ್ಲಿ ಬಾಲ್ ಹಿಡಿಯುವಾಗ ಮತ್ತೊಬ್ಬ ಆಟಗಾರನಿಗೆ ಢಿಕ್ಕಿ ಹೊಡೆದಿದ್ದರಿಂದ ತಲೆಗೆ ಗಾಯವಾಗಿ ೨೦ ವರ್ಷದ ಪೂರ್ವ ಬಂಗಾಳದ ಆಟಗಾರ ನಿಧನರಾಗಿದ್ದಾರೆ ಎಂದು ಬೆಂಗಾಲ್ ಕ್ರಿಕೆಟ್ ಸಂಘದ ಖಜಾಂಚಿ ವಿಶ್ವರೂಪ್ ಡೇ ತಿಳಿಸಿದ್ದಾರೆ.
ಗಾಯಗೊಂಡ ನಂತರ ಆಸ್ಪತ್ರೆಗೆ ಕೊಂಡಯ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಅಂಕಿತ್ ಬೆಂಗಾಲದ ೨೩ ವರ್ಷದದೊಳಗಿನ ಕ್ರಿಕೆಟ್ ತಂಡದ ಆರಂಭಿಕ ಆಟಗಾರನಾಗಿ ಕೂಡ ಪ್ರತಿನಿಧಿಸಿದ್ದರು.