ಪಿವಿ ಸಿಂಧು, ಪರುಪಲ್ಲಿ ಕಶ್ಯಪ್ 
ಕ್ರೀಡೆ

ಕಶ್ಯಪ್, ಸಿಂಧು ಪ್ರೀ ಕ್ವಾರ್ಟರ್‌ಗೆ

ಭಾರತದ ಭರವಸೆಯ ಶಟ್ಲರ್‍ಗಳಾದ ಪರುಪಳ್ಳಿ ಕಶ್ಯಪ್ ಹಾಗೂ ಪಿ.ವಿ. ಸಿಂಧು ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ವುಹಾನ್(ಚೀನಾ): ಭಾರತದ ಭರವಸೆಯ ಶಟ್ಲರ್‍ಗಳಾದ ಪರುಪಳ್ಳಿ ಕಶ್ಯಪ್ ಹಾಗೂ ಪಿ.ವಿ. ಸಿಂಧು ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್ ಅವರು ಚೈನೀಸ್ ತೈಪೇನ ಜೆನ್ ಹವೊ ಹ್ಸು ವಿರುದ್ಧ 15-21, 21-18, 21-19 ಗೇಮ್ಸ್ ಗಳ ಅಂತರದಲ್ಲಿ ಗೆಲವು ಪಡೆದರೆ, ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಿಂಧು, ಉಜ್ಬೇಕಿಸ್ತಾನದ ಅನಾಯಿತ್ ಖುರ್ಷುದ್ಯನ್ ವಿರುದ್ಧ 21-6, 21-5 ಗೇಮ್ಸ್ ಗಳ ಅಂತರದ ಜಯ ಸಾಧಿಸಿದರು.

ಕಶ್ಯಪ್ ತೀವ್ರ ಹೋರಾಟ: ವುಹಾನ್ ಸ್ಪೋರ್ಟ್ಸ್ ಸೆಂಟರ್ ಜಿಮ್ನೇಶಿಯಂನಲ್ಲಿ ನಡೆದ ಪರುಪಳ್ಳಿ ಕಶ್ಯಪ್ ಅವರ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಪ್ರಾಯಶಃ ಈ ಪಂದ್ಯ ಅವರ ವೃತ್ತಿಜೀವನದ ಈವರೆಗಿನ ಪಂದ್ಯಗಳಲ್ಲೇ ದೀರ್ಘಕಾಲದ ಪಂದ್ಯವಾಗಿರಬಹುದು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸೆಣೆಸಾಟದಲ್ಲಿ, ಇಬ್ಬರೂ ಸೋಲಲು ಸಿದ್ಧರಿರಲಿಲ್ಲ. ಗೆಲವಿಗಾಗಿ ಪಟ್ಟುಬಿಡದೇ ಆಡಿದ ಇಬ್ಬರ ಹೋರಾಟ ನೋಡುಗರನ್ನು ಎದೆಬಡಿತವನ್ನು ಹೆಚ್ಚಿಸಿತು. ಇಂಡಿಯಾ ಸೂಪರ್ ಸೀರಿಸ್‍ನಲ್ಲಿ ಕಶ್ಯಪ್ ಅವರನ್ನು ಮಣಿಸಿದ್ದರೂ, ಅವರ ಆಟವನ್ನು ಬಲ್ಲವರಾಗಿದ್ದ ಜೆನ್ ಹವೊ ಹ್ಸು ಅವರು ಸಾಕಷ್ಟು ತಯಾರಿ ನಡೆಸಿದೇ ಪಂದ್ಯಕ್ಕೆ ಕಾಲಿಟ್ಟಿದ್ದು ಅವರ ಆಟದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆಟದಲ್ಲಿ ಅವರು ಅನುಸರಿಸಿದ ಕೆಲವು ತಂತ್ರಗಾರಿಕೆಗಳು ಕಶ್ಯಪ್ ಅವರನ್ನು ಅಲ್ಲಲ್ಲಿ ಗೊಂದಲಕ್ಕೀಡು ಮಾಡಿದವು.

ಹಾಗಾಗಿ, ಮೊದಲ ಸೆಟ್‍ನಲ್ಲಿ ಜೆನ್ ಹವೊ ಅವರ ಆಟವನ್ನು ಸಂಪೂರ್ಣವಾಗಿ ಅರ್ಥ-ಮಾಡಿಕೊಳ್ಳುವಲ್ಲಿ ಎಡವಿದ ಪರುಪಳ್ಳಿ ಈ ಗೇಮ್ ನ ಗೆಲವನ್ನು ಎದುರಾಳಿಗೇ ಬಿಟ್ಟುಕೊಟ್ಟರು. ಇನ್ನು, ಎರಡನೇ ಗೇಮ್ನಲ್ಲಿ ಪರುಪಳ್ಳಿ ಅವರು ಪ್ರತಿತಂತ್ರವನ್ನು ರೂಪಿಸುವ ಮೊದಲೇ ಜೆನ್ ಹವೊ ಅವರು 5-2 ಅಂಕಗಳ ಮುನ್ನಡೆ ಪಡೆದುಕೊಂಡಾಗಿತ್ತು. ಆದರೆ, ಬೇಗನೇ ಎಚ್ಚೆತ್ತುಕೊಂಡ ಪರುಪಳ್ಳಿ, ಮಿಂಚಿನ ಆಟವಾಡಿ ಈ ಗೇಮïನಲ್ಲಿ 12-12ರ ಸಮಬಲ ಸಾಧಿಸಿದರು. ಇದೇ ಆಟವನ್ನು ಮುಂದುವರಿಸಿದ ಅವರು, ಒಂದು ಹಂತದಲ್ಲಿ 15-12ರ ಮುನ್ನಡೆ ಗಳಿಸಿದರು. ಅತ್ತ, ಜೆನ್ ಹವೊ ಪಟ್ಟುಬಿಡದೇ ಆಡಲಾರಂಭಿಸಿದರು. ಆದರೆ, ಎದುರಾಳಿಗಿಂತಲೂ ಉತ್ತಮ ಆಟ ಪ್ರದರ್ಶಿಸಿದ ಕಶ್ಯಪ್ ಈ ಗೇಮ್ನಲ್ಲಿ ಗೆಲವು ಪಡೆಯುವಲ್ಲಿ ಸಫಲರಾದರು.

ಇನ್ನು, ಮೂರನೇ ಹಾಗೂ ನಿರ್ಣಾಯಕ ಗೇಮ್ನಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದರು. ಆರಂಭದಲ್ಲಿ 2-5 ಅಂಕಗಳ ಮೂಲಕ ಮುನ್ನಡೆ ಸಾ„ಸಿದ್ದ ಜೆನ್ ಹವೊ ಅವರನ್ನು ಹಿಂದಿಕ್ಕಿದ ಕಶ್ಯಪ್, ಈ ಅಂತರವನ್ನು 16-18ಕ್ಕೆ ತಂದು ನಿಲ್ಲಿಸಿದರು. ಇದಾದ ಮೇಲೆ ತೈಪೇ ಆಟಗಾರನ ವಿರುದಟಛಿ ಮುನ್ನಡೆ ಪಡೆದುಕೊಂಡ ಅವರು ಗೇಮ್ ಗೆಲ್ಲುವಲ್ಲಿ ಯಶಸ್ವಿಯಾದರು.

ಜ್ವಾಲಾ-ಅಶ್ವಿನಿ ಸವಾಲು ಅಂತ್ಯ:
ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ನಿರೀಕ್ಷೆ ಹುಸಿಯಾಗಿದೆ. ಭಾರತದ ಪರ ಕಣಕ್ಕಿಳಿದಿದ್ದ ಜ್ವಾಲಾ ಗುಟ್ಟಾ- ಅಶ್ವಿನಿ ಪೊನ್ನಪ್ಪ ಜೋಡಿ, ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್ ತೈಪೇನ ಯಾ ಚಿಂಗ್ ಸು ಹಾಗೂ ಯು ಪೈ ಪೈ ಜೋಡಿ ವಿರುದ್ಧ 17-21, 21-15, 15-21 ಗೇಮ್ಗಳ ಅಂತರದಲ್ಲಿ ಸೋಲು ಕಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT