ಕ್ರೀಡೆ

2ನೇ ಸ್ಥಾನದಲ್ಲೇ ಭಾರತ

Shilpa D

ದುಬೈ: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ನೂತನ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನದ ಮುನ್ನಡೆಯನ್ನು ದುಪ್ಪಟ್ಟು ಹೆಚ್ಚಿಸಿಕೊಂಡಿದೆ.
ಗುರುವಾರ ಬಿಡುಗಡೆ ಮಾಡಲಾಗಿರುವ ಹೊರ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಒಟ್ಟು 129 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಆ ಮೂಲಕ ಎರಡನೇ ಸ್ಥಾನದಲ್ಲಿರುವ ಭಾರತಕ್ಕಿಂತ (117) 12 ಅಂಕಗಳ ಅಂತರದಲ್ಲಿ ಮುನ್ನಡೆ ಸಾಧಿಸಿದಂತಾಗಿದೆ.
ಇದಕ್ಕೆ ಮುನ್ನ ಆಸ್ಟ್ರೇಲಿಯನ್ನರು ಕೇವಲ 6 ಅಂಕದ ಅಂತರದಲ್ಲಿ ಮುನ್ನಡೆ ಹೊಂದಿದ್ದರು. ಫೈನಲ್ ತಲುಪಿದ ನ್ಯೂಜಿಲೆಂಡ್ (116) ಮೂರನೇ ಸ್ಥಾನ ಗೌರವ ಪಡೆದಿದೆ. ದಕ್ಷಿಣ ಆಫ್ರಿಕಾ (112) ಮತ್ತು ಶ್ರೀಲಂಕಾ(106) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಉಳಿದಂತೆ ಇಂಗ್ಲೆಂಡ್(94) ವೆಸ್ಟ್ ಇಂಡೀಸ್ (88) ಬಾಂಗ್ಲಾದೇಶ (88) ಮತ್ತು ಪಾಕಿಸ್ತಾನ ಕ್ರಮವಾಗಿ 6 ರಿಂದ 9ನೇ ಸ್ಥಾನಗಳನ್ನು ಹಂಚಿಕೊಂಡಿವೆ.
ಶ್ರೀಲಂಕಾ ನಂಬರ್ 1
ಈ ಮಧ್ಯೆ ಟಿ-20 ರ್ಯಾಂಕಿಂಗ್ ನಲ್ಲಿ ಶ್ರೀಲಂಕಾ ತಂಡ ಅಗ್ರಸ್ಥಾನದ ಹೆಗ್ಗಳಿಕೆಗೆ ಭಾಜನವಾಗಿದೆ. ಶ್ರೀಲಂಕಾ ಒಟ್ಟು 135 ಅಂಕಗಳಿಸಿ ಈ ಗೌರವ  ಪಡೆದಿದ್ದರೆ ಭಾರತ ತಂಡ 124 ಅಂಕಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಹೊಂದಿದೆ.


 

SCROLL FOR NEXT