ಜಗಮೋಹನ್ ದಾಲ್ಮಿಯಾ 
ಕ್ರೀಡೆ

ಶೀಘ್ರವೇ ನೂತನ ನೀತಿ ಸಂಹಿತೆ: ದಾಲ್ಮಿಯಾ

ಜನರ ದೃಷ್ಟಿಯಲ್ಲಿ ಕುಸಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವರ್ಚಸ್ಸನ್ನು ಮತ್ತೆ ಪುನರುತ್ಥಾನಗೊಳಿಸುವತ್ತ...

 ನವದೆಹಲಿ: ಜನರ ದೃಷ್ಟಿಯಲ್ಲಿ ಕುಸಿದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವರ್ಚಸ್ಸನ್ನು ಮತ್ತೆ ಪುನರುತ್ಥಾನಗೊಳಿಸುವತ್ತ ಬಿಸಿಸಿಐ ಹೆಜ್ಜೆಯಿಟ್ಟಿದ್ದು, ನೂತನ ನೀತಿ ಸಂಹಿತೆಯ ರಚನೆ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ತಿಳಿಸಿದ್ದಾಗಿ ಐಬಿಎನ್ ಟೈಮ್ಸ್  ವರದಿ ಮಾಡಿದೆ.
``ಬಿಸಿಸಿಐನ ಸಮಗ್ರತೆಗೆ ಧಕ್ಕೆ ಬಾರದಂತೆ ಹಾಗೂ ಜನರ ವಿಶ್ವಾಸವನ್ನು ಮತ್ತೆ ಗಳಿಸುವತ್ತ ಹೆಚ್ಚು ಗಮನ ಹರಿಸಲಾಗಿದೆ'' ಎಂದು ಹೇಳಿರುವ ಅವರು, ``ನೂತನವಾಗಿ ಅಸ್ವಿತ್ವಕ್ಕೆ ಬರಲಿರುವ ನೀತಿ ¸ಸಂಹಿತೆಯಲ್ಲಿ ಬಿಸಿಸಿಐಗೆ ಸಂಬಂಧಪಟ್ಟ ಯಾರೇ ಆಗಲಿ, ಅವರು ನಡೆನುಡಿ, ಅವರ ಚಟುವಟಿಕೆಗಳು... ಹೀಗೆ ಎಲ್ಲವೂ ಒಂದು ಸರಿದಾರಿಯಲ್ಲಿರುವಂತೆ ನೋಡಿಕೊಳ್ಳ ಲಾಗುವುದು. ಆಟಗಾರನಿರಲಿ, ಅಧಿಕಾರಿಯೇ ಇರಲಿ, ಅವರಿಂದ ಬಿಸಿಸಿಐನ ಧ್ಯೇಯೋದ್ದೇಶ ಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು'' ಎಂದಿದ್ದಾರೆ


ಏಜೆಂಟ್‍ಗಳಿಗೂ ಮಾನ್ಯತೆ

ಕ್ರಿಕೆಟ್ ಕ್ರೀಡೆಗೆ ಅಂಟಿಕೊಂಡಿರುವ ಮೋಸದ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಆಟಗಾರರ ಏಜೆಂಟ್ಗಳಿಗೆ ಬಿಸಿಸಿಐ  ಮಾನ್ಯತೆಯನ್ನು ಕಡ್ಡಾಯ ಗೊಳಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್  ದಾಲ್ಮಿಯಾ  ತಿಳಿಸಿದ್ದಾರೆ. ಆಟಗಾರರ ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲಿರುವ ಏಜೆಂಟ್ಗಳ ಮೇಲೂ ನಿಗಾ ವಹಿಸಲು ಈ ವ್ಯವಸ್ಥೆ ಜಾರಿಗೊಳಿಸುವುದಾಗಿ ಅವರು ತಿಳಿಸಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video