ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೈಕ್ ರೇಸರ್ 
ಕ್ರೀಡೆ

ದಕ್ಷಿಣ ಡೇರ್: ಸಂದೀಪ್ ಶರ್ಮಾ, ಕರಣ್ ಮುನ್ನಡೆ

ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ...

ಚಿತ್ರದುರ್ಗ: ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಆರಂಭವಾದ ಸ್ಪರ್ಧೆಯಲ್ಲಿ 170 ಮೋಟಾರ್ ಸ್ಪರ್ಧಿಗಳು ಭಾಗವಹಿಸಿದ್ದು, ಮೊದಲ ದಿನ ಎರಡು ಹಂತದಲ್ಲಿ ನಡೆಯಿತು. ಏರಿಳಿತದ ರಸ್ತೆಯಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರೂ, ಕಲ್ಲು ಬಂಡೆಗಳನ್ನು ದಾಟಿ ಸಾಗುತ್ತಿದ್ದ ಸ್ಪರ್ಧಿಗಳ ಉತ್ಸಾಹ ರೋಚಕವಾಗಿತ್ತು.

ಅಲ್ಟಿಮೇಟ್ ಕಾರ್ ವಿಭಾಗದಲ್ಲಿ 75 ಕಿ.ಮೀ ದೂರದ ರೇಸ್ ನಡೆದಿದ್ದು, ಹಾಲಿ ಚಾಂಪಿಯನ್ ಸಂದೀಪ್ ಶರ್ಮಾ ಮತ್ತು ಅವರ ನೇವಿಗೇಟರ್ ಕರಣ್ ಆರ್ಯ 1: 33: 49 ಗಂಟೆಗಳಲ್ಲಿ ಕ್ರಮಿಸಿ ಸಮರ್ಥ್ ಯಾದವ್ ಮತ್ತು ಗೌರವ್ 1: 36: 65 ಗಂಟೆಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದರು. ಹರ್ಪ್ರೀತ್ ಬವಾ ಮತ್ತು ಪರ್ಮಿಂದರ್ ಠಾಕೂರ್ 1: 39:14 ಗಂಟೆಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದರು.

ಇನ್ನು ಅಲ್ಟಿಮೇಟ್ ಬೈಕ್ ವಿಭಾಗದಲ್ಲಿ ಅರವಿಂದ್ ಕೆ.ಪಿ.1:28:44 ಗಂಟೆಗಳಲ್ಲಿ ಕ್ರಮಿಸಿ ಮುನ್ನಡೆ ಸಾಧಿಸಿದರು. ನಂತರದ ಸ್ಥಾನದಲ್ಲಿ ನಟರಾಜ್ ಮತ್ತು ವಿಶ್ವಾಸ್ ಎಸ್.ಡಿ.ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಎಂಡ್ಯೂ ರೆನ್ಸ್ ಕಾರ್ ವಿಭಾಗದಲ್ಲಿ ಒಟ್ಟು 370 ಕಿ.ಮೀ ಕ್ರಮಿಸಲಿದ್ದು, ಟಿಎಸ್‌ಡಿ ಮಾದರಿಯಲ್ಲಿ ಸ್ಪರ್ಧಿಗಳನ್ನು ನಿರ್ಧರಿಸಲಾಗುವುದು. ದಿಲೀಪ್ ಜೈನ್ ಹಾಗೂ ಚಂದು ಶೇಖರ್ 40ಸೆ.ಗಳ ಅಂತರದೊಂದಿಗೆ ರೇಸ್‌ನಲ್ಲಿ ಮುನ್ನಡೆ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT