ಕ್ರೀಡೆ

ಹಾಕಿ: ಫ್ರಾನ್ಸ್ ವಿರುದ್ಧ ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ

Srinivas Rao BV

ನವದೆಹಲಿ: ಆರಂಭಿಕ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಫ್ರಾನ್ಸ್ ವಿರುದ್ಧ ಗೆದ್ದು, ಯುರೋಪ್ ಪ್ರವಾಸದಲ್ಲಿ ಶುಭಾರಂಭ ಮಾಡಿರುವ ಭಾರತ ಹಾಕಿ ತಂಡ ಎರಡನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ.

ಇಂದು ವಾಟಿಗ್ನಿಸ್ ಸ್ಪೋರ್ಟ್ಸ್ ಸೆಂಟರ್‍ನಲ್ಲಿ ನಡೆಯಲಿರುವ ಫ್ರಾನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಜಯ ಸಾದಹಿಸುವ ತವಕದಲ್ಲಿ ಸರ್ದಾರ್ ಸಿಂಗ್ ಪಡೆ ಇದೆ. ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಟೂರ್ನಿಯ ಬಳಿಕ ತಂಡದ ಕೋಚ್ವಿವಾದಾತ್ಮಕ ಬೆಳವಣಿಗೆಯಲ್ಲಿ ಬದಲಾದ ನಂತರ ಭಾರತಕ್ಕೆ ಇದು ಮೊದಲ ಟೂರ್ನಿಯಾಗಿದೆ. ಹಾಗಾಗಿ ಈ ಪ್ರವಾಸದಲ್ಲಿ ಭಾರತ ಯಾವ ರೀತಿಯ ಪ್ರದ-ರ್ಶನ ನೀಡ-ಲಿದೆ ಎಂಬುದು
ಎಲ್ಲರ ಕುತೂಹಲ ಕೆರಳಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಭಾರತ ತಂಡ ನಾಲ್ವರು ವಿದೇಶಿ ಕೋಚ್‍ಗಳನ್ನು ಹೊಂದಿದೆ. ಹಾಗಾಗಿ ಪ್ರತಿ ಬಾರಿ ಕೋಚ್ ಬದಲಾವಣೆಯಾದಾಗಲೂ ತಂಡದ ಸ್ವರೂಪ ಹಾಗೂ ತಂಡದಲ್ಲಿನ ವಾತಾವರಣ ಸಂಪೂರ್ಣವಾಗಿ ಬದಲಾಗುತ್ತದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಆಟಗಾರರಿಗೆ ಸಾಕಷ್ಟು ಸಮಯ ಬೇಕಾ ಗುತ್ತದೆ. ಕೇವಲ ಆಟ-ಗಾ-ರ-ರಷ್ಟೇ ಅಲ್ಲ ಉನ್ನತ ನಿರ್ದೇಶಕರಾಗಿದ್ದ ರೋಲಂಟ್ ಓಲ್ಟ್‍ಮನ್ಸ್ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಅಗ್ನಿಪರೀಕ್ಷೆ ಎದುರಾಗಿದೆ. ಭಾರತ ತಂಡ ಈ ಎಲ್ಲ ಸವಾಲುಗಳನ್ನು ಮೊದಲ ಪಂದ್ಯದಲ್ಲಿ ಮೆಟ್ಟಿ ನಿಂತು ಉತ್ತಮ ಪ್ರದರ್ಶನ ನೀಡಿದೆ. ಇನ್ನು ಫ್ರಾನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ನಿಜವಾಗಿಯು ತೃಪ್ತಿದಾಯಕವಾಗಿತ್ತು. ತನ್ನ ಆಕ್ರಮಣಕಾರಿ ಆಟದ ಮೂಲಕ ಪಂದ್ಯದಲ್ಲಿ ಆತಿಥೇಯರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಭಾರತ ಯಶ ಕಂಡಿತ್ತು.

ವಿಶ್ವ ಹಾಕಿ ಲೀಗ್ ಸೆಮಿ ಫೈನಲ್ ಟೂರ್ನಿಗೆ ಅಲಭ್ಯರಾಗಿದ್ದ ವಿ.ಆರ್ ರಘುನಾಥ್, ಎಸ್.ವಿ ಸುನೀಲ್ ಸೇರಿದಂತೆ ಇತರೆ ಪ್ರಮುಖ ಆಟಗಾರರು, ಈ ಪ್ರವಾಸದಲ್ಲಿ ಮರಳಿರುವುದು ತಂಡ ಪೂರ್ಣ ಪ್ರಮಾಣದ ಬಲದೊಂದಿಗೆ ಕಣಕ್ಕಿಳಿದಂತಾಗಿದೆ. ನಾಯಕ ಸರ್ದಾರ್ ಸಿಂಗ್ ನೇತೃತ್ವದಲ್ಲಿ ಮಿಡ್‍ ಫೀಲ್ಡ್, ಡಿಫೆಂಡ್ ಮತ್ತು ಫಾರ್ವರ್ಡ್ ವಿಭಾಗ ಸಮತೋಲನದಿಂದ ಕೂಡಿದೆ.

ಆರಂಭಿಕ ಪಂದ್ಯದಲ್ಲಿ ಫ್ರಾನ್ಸ್ ತಂಡದ ರಕ್ಷಣಾತ್ಮಕ ವಿಭಾಗವ ನ್ನು ಯಶಸ್ವಿಯಾಗಿ ಮೆಟ್ಟಿನಿಂತ ಭಾರತದ ಮುಂಪಡೆ ವಿಭಾಗ, ಪ್ರತಿಸ್ಪರ್ಧಿ ತಂಡದ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿತ್ತು. ಈಗ ಎರಡನೇ ಪಂದ್ಯದಲ್ಲೂ ಗೆಲುವು ದಾಖಲಿಸುವ ಮೂಲಕ ಫ್ರಾನ್ಸ್ ವಿರುದ್ಧ ಕ್ಲೀನ್‍ಸ್ವೀಪ್‍ನ ಗುರಿ ಹೊತ್ತಿದೆ.

SCROLL FOR NEXT