ಕ್ರೀಡೆ

ಭಾರತಕ್ಕೆ ಸಿಗಲಿದೆ ಡಬಲ್ಸ್ ಅರ್ಹತೆ: ಕಿಮ್

Srinivas Rao BV

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಭಾರತದ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅರ್ಹತೆ ಪಡೆಯಲಿದ್ದಾರೆ ಎಂದು ಮಲೇಷಿಯಾದ ಹೆಸರಾಂತ ಡಬಲ್ಸ್ ಕೋಚ್ ಕಿಮ್ ಟಾನ್ ಹೆರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಹಾಗೂ ಅಶ್ವಿನಿ ಮತ್ತು ಪುರುಷರ ಡಬಲ್ಸ್ ವಿಭಾಗದಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ಜೋಡಿ ರಿಯೋ ಒಲಿಂಪಿಕ್ಸ್‍ಗೆ ಅರ್ಹತೆ ಪಡೆಯುವ ಬಗ್ಗೆ ನನಗೆ ವಿಶ್ವಾಸವಿದೆ'' ಎಂದು ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡಕ್ಕೆ ಮುಂದಿನ ಐದು ವರ್ಷಗಳ ಕಾಲದವರೆಗೆ ಮಾರ್ಗದರ್ಶನ ಮಾಡಲು ಒಪ್ಪಂದ ಮಾಡಿಕೊಂಡಿರುವ ಹಾಗೂ ಮುಂದಿನ ತಿಂಗಳೇ ಕಾರ್ಯೋನ್ಮುಖವಾಗಲಿರುವ ಕಿಮ್  ಹೇಳಿದ್ದಾರೆ.

`ಭಾರತದಲ್ಲಿ ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ, ಸುಮೀತ್ ಹಾಗೂ ಮನು ಅವರು ಉತ್ತಮ ಡಬಲ್ಸ್ ಆಟಗಾರರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರುಗಳು ತೋರುತ್ತಿರುವ ಪ್ರದರ್ಶನ ಕೂಡ ಆಶಾ ದಾಯಕವಾಗಿದೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿ ಯನ್ ಶಿಪ್‍ನಲ್ಲಿಯೂ ಅವರು ಇದೇ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡದ್ದೇ ಆದಲ್ಲಿ ನಿಸ್ಸಂಶಯವಾಗಿಯೂ ಈ ಜೋಡಿ ರಿಯೋ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಲಿದೆ. ಅಂದಹಾಗೆ ಒಲಿಂಪಿಕ್ಸ್‍ನಲ್ಲಿ ಏನು ಬೇಕಾದರೂ ನಡೆಯಬಹುದು. ನಾನು ಮುಂದಿನ ತಿಂಗಳು ಕಾರ್ಯಭಾರ ಹೊತ್ತುಕೊಂಡಾಗ ನನ್ನಿಂದ ಸಾಧ್ಯವಾದಷ್ಟೂ ಆಟಗಾರರನ್ನು ಸಜ್ಜುಗೊಳಿಸಲು ಗಮನವೀಯುತ್ತೇನೆ'' ಎಂದು 43
ವರ್ಷದ ಕಿಮ್ ತಿಳಿಸಿದ್ದಾರೆ.

SCROLL FOR NEXT