ಕ್ರೀಡೆ

ಫುಟ್ ಬಾಲ್: ಭಾರತಕ್ಕೆ 156 ನೇ ಶ್ರೇಯಾಂಕ

Srinivas Rao BV

ನವದೆಹಲಿ: ಇತ್ತೀಚೆಗೆ ಫಿಫಾ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ 156 ನೇ ಸ್ಥಾನದಲ್ಲೇ ಮುಂದುವರೆದಿದ್ದರೆ ವಿಶ್ವ ಚಾಂಪಿಯನ್ ಜರ್ಮನಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಕಳೆದ ತಿಂಗಳು 2018ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಗಾಗಿನ ಎರಡು ಪಂದ್ಯಗಳಲ್ಲಿ ಓಮನ್ ಹಾಗೂ ಗುವಾಮ್  ವಿರುದ್ಧ ಸೋಲನುಭವಿಸಿದ ಸೋಲನುಭವಿಸಿದ ಫಲವಾಗಿ 15 ಸ್ಥಾನ ಕುಸಿತ ಕಂಡ ಭಾರತ ಪ್ರಸಕ್ತ 160 ರೇಟಿಂಗ್ ಪಾಯಿಂಟ್ಸ್ ಗಳಿಸಿದೆ. ಹೀಗಾಗಿ ಏಷ್ಯಾದ ಕಿರ್ಗಿಸ್ತಾನದೊಂದಿಗೆ ಭಾರತ 156ನೇ ಸ್ಥಾನವನ್ನು ಹಂಚಿಕೊಂಡಿದೆ. ನೆರೆಯ ಪಾಕಿಸ್ತಾನ 171ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಪಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಅರ್ಜೆಂಟೀನಾ ನಂ.1 ಸ್ಥಾನದಲ್ಲಿದ್ದರೆ, ಬೆಲ್ಜಿಯಂ 2ನೇ ಸ್ಥಾನಕ್ಕೆ ಜಿಗಿದಿದೆ.

SCROLL FOR NEXT