ವಾಷಿಂಗ್ಟನ್: ಬ್ರಿಟನ್‍ನ ಅಗ್ರಶ್ರೇಯಾಂಕಿತ ಟೆನಿಸಿಗ ಆ್ಯಂಡಿ ಮರ್ರೆ ವಾಷಿಂಗ್ಟನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮತ್ತೆ ಆಘಾತ ಅನುಭವಿಸಿದರು.
ಬುಧವಾರ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಮಾರ್ಜಿಯಾ ಜೋಡಿ ಎದುರು ಮೊದಲ ಸುತ್ತಿನಲ್ಲೇ ಸೋಲನುಭವಿಸಿ ಸ್ತಂಭಿಸಿದ್ದ ಮರ್ರೆ ಇದೀಗ ಪುರುಷರ ಸಿಂಗಲ್ಸ್‍ನಲ್ಲೂ ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ವಿಶ್ವದ 53ನೇ ಶ್ರೇಯಾಂಕಿತ ಆಟಗಾರ, ರಷ್ಯಾದ ತೇಮೂರಜ್ ಗಾಬಶ್ವಿಲಿ ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಮರ್ರೆಯನ್ನು 64, 46, 76 (7/4) ಸೆಟ್ ಗಳಿಂದ ಮಣಿಸಿದರು.
2 ತಾಸು ಹಾಗೂ 42 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಆಕ್ರಮಣಕಾರಿ ಆಟವಾಡಿದ ಗಾಬಶ್ವಿಲಿ, ಮರ್ರೆಯನ್ನು ಸಂಪೂರ್ಣವಾಗಿ ಹೈರಾಣಾಗಿಸಿದರು. 1993ರಲ್ಲಿ ಇವಾನ್ ಲೆಂಡ್ಲ್ ನಂತರ ವಾಷಿಂಗ್ಟನ್‍ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದ ಮರ್ರೆ ಈ ಆಘಾತಕಾರಿ ಸೋಲಿನಿಂದ ತೀವ್ರ ನಿರಾಸೆಗೆ ಒಳಗಾದರು.