ಕ್ರೀಡೆ

ಪ್ರೊ.ಕಬ್ಬಡ್ಡಿ ಬೆಂಗಳೂರು ಓಟಕ್ಕೆ ಬ್ರೇಕ್

ನವದೆಹಲಿ: ಕಳೆದೆರಡು ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆಲುವಿನ ರುಚಿ ಕಂಡಿದ್ದ ಬೆಂಗಳೂರು ಬುಲ್ಸ್ ತಂಡ, ಶನಿವಾರ ನಡೆದ ಪಾಟ್ನಾ ಪೈರೇಟ್ಸ್ ವಿರುದ್ಧ ಪಂದ್ಯದಲ್ಲಿ 28-30 ಅಂಕಗಳ ಅಂತರದಲ್ಲಿ ಸೋಲು ಕಂಡಿತು. ಆದರೆ, ಅಂಕಪಟ್ಟಿಯಲ್ಲಿ ಅದರ ಸ್ಥಾನ ಅಬಾಧಿತವಾಗಿಲ್ಲ. ಎಂಟು ಪಂದ್ಯಗಳಿಂದ 30 ಅಂಕಗಳನ್ನು ಸಂಪಾದಿಸಿರುವ ಅದು, 3ನೇ ಸ್ಥಾನದಲ್ಲೇ ಮುಂದುವರಿದಿದೆ.

ಶನಿವಾರ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಪಾಟ್ನಾ, ಬಲಬದಿಯ ಕೋರ್ಟ್ ಆಯ್ತೆ ಮಾಡಿಕೊಂಡಿತು. ಇದರ ಬೆನ್ನಲ್ಲೇ ಮೊದಲ ರೈಡ್ ನಡೆಸಿ ಯಶಸ್ವಿಯಾದ ಬೆಂಗಳೂರು  ತಂಡದ ಅಜಯ್ ಠಾಕೂರ್, ತಮ್ಮ ತಂಡದ ಅಂಕದ ಖಾತೆ ತೆರೆದರು. ಆನಂತರ, ಪಾಟ್ನಾ ತಂಡ ಸಹ ಅಂಕಗಳ ಖಾತೆ ತೆರೆಯಿತು. ಆದರೆ, ಲಗುಬಗೆಯಲ್ಲಿ ಅಂಕ ಪೇರಿಸುತ್ತಾ ಸಾಗಿದ ಬೆಂಗಳೂರು ತಂಡ, ಪಾಟ್ನಾವನ್ನು ಹಿಂದಿಕ್ಕಿ ಸಾಗಿತು. ಆದರೆ, ಕೆಲವೊಂದು ವಿಫಲ ರೈಡ್‍ಗಳಿಂದ ಹಾಗೂ ಎದುರಾಳಿಗಳ ಸಫಲ ದಾಳಿಯಿಂದಾಗಿ ಬೆಂಗಳೂರು ತಂಡ ಹಿನ್ನಡೆ ಅನುಭವಿಸಿತಲ್ಲದೆ, ಪಂದ್ಯದ ಮೊದಲಾರ್ಧ ಮುಗಿಯುವ ವೇಳೆಗೆ 24-18ರಷ್ಟು ಹಿನ್ನಡೆ ಅನುಭವಿಸಿತು.

ಆದರೆ, ಆನಂತರ ಮುಂದುವರಿದ ಪಂದ್ಯದಲ್ಲಿ ಮಂಜಿತ್ ಚಿಲ್ಲರ್ ಅವರ ಮೂರು ಹಾಗೂ ಧರ್ಮರಾಜ್ ಚೆರಾಲತಾನ್, ಅಜಯ್ ಠಾಕೂರ್ ಅವರ ತಲಾ ಒಂದು ಯಶಸ್ವಿ ರೈಡ್
ಗಳು, ಬೆಂಗಳೂರು ತಂಡಕ್ಕೆ ಅಂಕಗಳ ಹರಿವನ್ನು ತಂದುಕೊಟ್ಟಿತಲ್ಲದೆ, ಅಂಕಗಳ ಅಂತರವನ್ನು 38ನೇ ನಿಮಿಷದ ಹೊತ್ತಿಗೆ 28-26ಕ್ಕೆ ಬಂದು ನಿಲ್ಲಿಸಿತು. ಆದರೂ, ಪಂದ್ಯದ ಕೊನೆಯವರೆಗೂ ಇದೇ ಅಂತರ ಮುಂದುವರಿದಿದ್ದರಿಂದ ಬೆಂಗಳೂರು ತಂಡ, ಕೇವಲ 2 ಅಂಕಗಳಿಂದ ಸೋಲು ಕಾಣಬೇಕಾಯಿತು.

SCROLL FOR NEXT