ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು (ಸಂಗ್ರಹ ಚಿತ್ರ) 
ಕ್ರೀಡೆ

ಗೆಲುವಿನ ಹೊಸ್ತಿಲಲ್ಲಿ ಕೆಎಸ್‍ಸಿಎ ಇಲೆವೆನ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಎಸ್‍ಸಿಎ ಇಲೆವೆನ್ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆ ತಂಡಗಳ ನಡುವಿನ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಸೆಮಿಫೈನಲ್ ಪಂದ್ಯ ತೀವ್ರ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ...

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೆಎಸ್‍ಸಿಎ ಇಲೆವೆನ್ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆ ತಂಡಗಳ ನಡುವಿನ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಸೆಮಿಫೈನಲ್ ಪಂದ್ಯ ತೀವ್ರ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ.

ತನ್ನ ಮೊದಲ ಇನಿಂಗ್ಸ್‍ನಲ್ಲಿ ವಿದರ್ಭ ಗಳಿಸಿದ್ದ 352 ರನ್‍ಗೆ ಉತ್ತರವಾಗಿ ಪಂದ್ಯದ ಎರಡನೇ ದಿನವಾದ ಭಾನುವಾರದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿದ್ದ ಕೆಎಸ್‍ಸಿಎ ಇಲೆವೆನ್, ಸೋಮವಾರ ತನ್ನ ಇನಿಂಗ್ಸ್ ಮುಂದುವರೆಸಿ 418 ರನ್‍ಗಳಿಗೆ ಆಲೌಟ್ ಆಯಿತು. ಭಾನುವಾರ 93 ರನ್ ಗಳಿಸಿ ಅಜೇಯರಾಗುಳಿದಿದ್ದ ಪವನ್ ದೇಶಪಾಂಡೆ ಶತಕ ಪೂರೈಸಿದ್ದು ದಿನದ ವಿಶೇಷವಾಗಿತ್ತು.

ಕೆಎಸ್ ಸಿಎ ತಂಡದ ಮೊದಲ ಇನ್ನಿಂಗ್ಸ್ ನಂತರ ತನ್ನ ದ್ವಿತೀಯ ಇನಿಂಗ್ಸ್ ಮುಂದುವರೆಸಿದ ವಿದರ್ಭ, ದಿನಾಂತ್ಯದ ಹೊತ್ತಿಗೆ 102 ರನ್ ಪೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಮಿಂಚಿನ ದಾಳಿ ನಡೆಸಿದ ಕೆಎಸ್‍ಸಿಎ ತಂಡದ ಅಭಿಮನ್ಯು ಮಿಥುನ್ ವಿದರ್ಭದ ಮೂರು ವಿಕೆಟ್ ಕೆಡವಿ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು.

ಸಂಕ್ಷಿಪ್ತ ಸ್ಕೋರ್: ವಿದರ್ಭ 353 ಮತ್ತು 102ಕ್ಕೆ 6 (ಶಲಭ್ ಶ್ರೀವಾಸ್ತವ 48; ಅಭಿಮನ್ಯು ಮಿಥುನ್ 29ಕ್ಕೆ 3) ಕೆಎಸ್‍ಸಿಎ ಮೊದಲ ಇನಿಂಗ್ಸ್ 418 (ಅಭಿಶೇಕ್ ರೆಡ್ಡಿ 167, ಪವನ್ ದೇಶಪಾಂಡೆ 104; ಎಸ್. ಅರವಿಂದ್ 46; ಸ್ವಪ್ನಿಲ್ ಬಂಡೀವರ್ 51ಕ್ಕೆ 3).

ಹರ್ಯಾಣಕ್ಕೆ ಸೋಲು: ಇನ್ನು ಆಲೂರಿನಲ್ಲಿ ನಡೆಯುತ್ತಿದ್ದ ಟೂರ್ನಿಯ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಡಿ.ವೈ. ಪಾಟೀಲ್ ತಂಡ, ಹರ್ಯಾಣ ಕ್ರಿಕೆಟ್ ಸಂಸ್ಥೆ ತಂಡದ ವಿರುದ್ಧ 6 ವಿಕೆಟ್ ಜಯ ಸಾಧಿಸಿದೆ.

ಸಂಕ್ಷಿಪ್ತ ಸ್ಕೋರ್: ಹರ್ಯಾಣ 221 ಮತ್ತು 138; ಡಿ.ವೈ. ಪಾಟೀಲ್: 199 ಮತ್ತು 165ಕ್ಕೆ 4 (ಶೋಯೆಬ್ ಶೇಕ್ 41, ಗೌರವ್ ಜಾಥರ್ 40; ಜಯಂತ್ ಯಾದವ್ 64ಕ್ಕೆ 2).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!