ಹೈದರಬಾದ್: ವಾಹನ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಭಾರತದ ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾಗೆ ಹೈದರಾಬಾದ್ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.
ಸಾನಿಯಾ ಮಿರ್ಜಾರ ಟೊಯೋಟಾ ಫಾರ್ಚೂನ್ ಕಾರಿನ ನಂಬರ್ ಪ್ಲೇಟ್ ನಿಯಮದನ್ವಯ ಇರಲಿಲ್ಲ. ಹೈದರಬಾದ್ ನ ಜ್ಯುಬ್ಲಿ ಹಿಲ್ಸ್ ನಲ್ಲಿ ವಾಹನಗಳ ತಪಾಸಣೆ ವೇಳೆ ನಂಬರ್ ಪ್ಲೇಟ್ನಲ್ಲಿ ನಿಯಮ ಉಲ್ಲಂಘನೆಯನ್ನು ಗುರುತಿಸಿದ ಟ್ರಾಫಿಕ್ ಪೊಲೀಸರು ಸಾನಿಯಾ ಮಿರ್ಜಾಗೆ 200 ರೂಪಾಯಿ ದಂಡ ವಿಧಿಸಿದ್ದಾರೆ.
ಭಾರತ ನಂಬರ್ ಒನ್ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.