ಭಾರತೀಯ ಹಾಕಿ ತಂಡ 
ಕ್ರೀಡೆ

ಹಾಕಿ: ಸ್ಪೇನ್ಗೆ- ಭಾರತ ತಿರುಗೇಟು

ಯೂರೋಪ್ ಪ್ರವಾಸದಲ್ಲಿರುವ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಸೋಲನುಭವಿಸಿತ್ತಾದರೂ ಎರಡನೇ ಪಂದ್ಯದಲ್ಲಿ ಅರ್ಹ ಗೆಲುವು ಸಂಪಾದಿಸಿ ತಿರುಗೇಟು ನೀಡುವಲ್ಲಿ ಸಫಲವಾಗಿದೆ...

ಸ್ಯಾಂಟ್ ಕ್ಯೂಗಟ್ ಡೆಲ್ ವಾಲೆಸ್: ಯೂರೋಪ್ ಪ್ರವಾಸದಲ್ಲಿರುವ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಸೋಲನುಭವಿಸಿತ್ತಾದರೂ ಎರಡನೇ ಪಂದ್ಯದಲ್ಲಿ ಅರ್ಹ ಗೆಲುವು ಸಂಪಾದಿಸಿ ತಿರುಗೇಟು ನೀಡುವಲ್ಲಿ ಸಫಲವಾಗಿದೆ. 
ಇದರಿಂದಾಗಿ ಮೂರು ಪಂದ್ಯ ಸರಣಿ 1-1ರಿಂದ ಸಮಬಲ ಸಾಧಿಸಿದಂತಾಗಿದೆ. ಬುಧವಾರ ನಡೆದ ಪಂದ್ಯದಲ್ಲಿ ಸರ್ದಾರ್ ಸಿಂಗ ನೇತೃತ್ವದ ಭಾರತ ತಂಡ 2-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ ಆರಂಭಿಕ ನಿಮಿಷದಿಂದಲೂ ಉಭಯ ತಂಡಗಳು ತಮ್ಮ ಕೌಶಲಗಳನ್ನು ಪ್ರದರ್ಶಿಸುತ್ತಾ ಆಕ್ರಮಣಕಾರಿ ಆಟಕ್ಕೆ ಮುಂದಾದವು. 
ಭಾರತದ ಆಟಗಾರರಾದ ಎಸ್.ವಿ ಸುನೀಲ್ ಹಾಗೂ ಆಕಾಶ್ದೀದಪ್ ಸಿಂಗ್ ಚೆಂಡನ್ನು ಅತ್ಯದ್ಭುತ ರೀತಿಯಲ್ಲಿ ಪಾಸ್ ಮಾಡುತ್ತಾ ಗೋಲಿನತ್ತ ಕೊಂಡೊಯ್ದರೂ, ಸ್ಪೇನ್ ಗೋಲಿ ಅತ್ಯುತ್ತಮ ರೀತಿಯಲ್ಲಿ ಅದನ್ನು ತಡೆಯುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಕ್ವಾರ್ಟರ್ ನಲ್ಲಿ ಉಭಯ ತಂಡಗಳು ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ