ಪ್ರೊ ಕಬಡ್ಡಿ 
ಕ್ರೀಡೆ

ತವರಿನಲ್ಲಿ ಮುಗ್ಗರಿಸಿದ ಬುಲ್ಸ್

ರಕ್ಷಣಾತ್ಮಕ ವಿಭಾಗ ನಿರೀಕ್ಷಿತ ಪ್ರದರ್ಶನ ತೋರದ ಬೆಂಗಳೂರು ಬುಲ್ಸ್ ತಂಡ, ತನ್ನ ತವರಿನ ಅಂಗಣದ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ...

ಬೆಂಗಳೂರು: ರಕ್ಷಣಾತ್ಮಕ ವಿಭಾಗ ನಿರೀಕ್ಷಿತ ಪ್ರದರ್ಶನ ತೋರದ ಬೆಂಗಳೂರು ಬುಲ್ಸ್ ತಂಡ, ತನ್ನ ತವರಿನ ಅಂಗಣದ ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದೆ. 
ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡ 36-29 ಅಂಕಗಳ ಅಂತರದಲ್ಲಿ ಬೆಂಗಳೂರು ಬುಲ್ಸ್ ತಂಡದ ವಿರುದ್ಧ ಗೆಲುವು ದಾಖಲಿಸಿತು. ಪಂದ್ಯದ ಬಹುತೇಕ ಹಂತದಲ್ಲಿ ಬೆಂಗಳೂರು ತಂಡದ ಪ್ರಮುಖ ಆಟಗಾರರಾದ ಮಂಜೀತ್ ಚಿಲ್ಲರ್ ಹಾಗೂ ಅಜಯ್ ಠಾಕೂರ್ ಅವರನ್ನು ಮೈದಾನದಿಂದ ಹೊರಗಿಡುವಲ್ಲಿ ಯಶಸ್ವಿಯಾದ ಯು ಮುಂಬಾ ಸಹಜವಾಗಿಯೇ ಉತ್ತಮ ಮುನ್ನಡೆಡ ಪಡೆಯುವಲ್ಲಿ ಯಶಸ್ವಿಯಾಯಿತು. 
ಬುಲ್ಸ್ ಪರ ಪ್ರಮುಖ ರೈಡರ್ ಅಜಯ್ ಠಾಕೂರ್ 10 ರೈಡ್ ಗಳಿಂದ ಕೇವಲ 2 ಅಂಕಗಳನ್ನಷ್ಟೇ ಗಳಿಸಲು ಸಾಧ್ಯವಾದರು. ಇನ್ನು ನಾಯಕ ಮಂಜೀತ್ ಚಿಲ್ಲರ್ 7 ಅಂಕಗಳನ್ನು ಗಳಿಸಿದ್ದು, ತಂಡದ ಪರ ಆಟಗಾರ ಗಳಿಸಿದ ಗರಿಷ್ಠ ಮೊತ್ತವಾಗಿತ್ತು. ಪಂದ್ಯದಲ್ಲಿ ಅಂಪೈರ್ ತೀರ್ಪು ಮನವಿಯನ್ನು ಬಳಸಿಕೊಳ್ಳುವಲ್ಲಿ ಬುಲ್ಸ್ ವಿಫಲವಾದರೆ ಮುಂಬೈ ತಂಡ ಸಂಪೂರ್ಣ ಲಾಭ ಪಡೆಯಿತು. 
ಕಬಡ್ಡಿ ಹಬ್ಬಕ್ಕೆ ತಾರಾ ಮೆರುಗು 
ಉದ್ಯಾನನಗರಿಯಲ್ಲಿ ಶುರುವಾದ ಕಬಡ್ಡಿ ಹಬ್ಬಕ್ಕೆ ತಾರಾ ಮೆರುಗಿನ ಸ್ಪರ್ಶವಾಯಿತು. ಸಿನಿ ಹಾಗೂ ಕ್ರೀಡಾ ತಾರೆಯರು ಆಗಮಿಸಿ, ದೇಸೀ ಕ್ರೀಡೆಗೆ ಕಳೆತಂದರು. ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದರು. ನಟಿ ಹರ್ಷಿಕಾ ಪೂಣಚ್ಚ ಸಹ ಆಗಮಿಸಿದ್ದರು. ಬೆಂಗಳೂರು ಎಫ್ ಸಿ ತಂಡದ ಕೋಚ್ ಆ್ಯಶ್ಲೆ ವೆಸ್ಟ್ ವುಡ್ ಕುಟುಂಬ ಸಮೇತರಾಗಿ ಪಂದ್ಯವನ್ನು ವೀಕ್ಷಿಸಿದರು. ರಾಬಿನ್ ಸಿಂಗ್, ಎನ್.ಎಸ್ ಮಂಜು ಸೇರಿದಂತೆ ಇತರೆ ಆಟಗಾರರು ಸಾಥ್ ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!