ರೋಹನ್ ಬೋಪಣ್ಣ - ಫ್ಲೋರಿನ್ ಮರ್ಜಿಯಾ 
ಕ್ರೀಡೆ

ರೋಹನ್ ಬೋಪಣ್ಣ ಜೋಡಿಗೆ ನಿರಾಸೆ

ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿಯು, ಕೆನಡಿಯನ್...

ಮಾಂಟ್ರಿಯಲ್: ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿಯು, ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದೆ.

ಯುನಿಪ್ರಿಕ್ಸ್ ಕ್ರೀಡಾಂಗಣದ ಹಾರ್ಡ್ ಕೋರ್ಟ್‍ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಜೋಡಿ, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಜ್ಯಾಂಕೊ ತಿಪ್ಸರ್‍ವಿಚ್ ಜೋಡಿ ವಿರುದ್ಧ 3-6, 7-5, 3-10 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡಿತು.

ಒಂದು ಗಂಟೆ 27 ನಿಮಿಷಗಳ ಪಂದ್ಯದಲ್ಲಿ ಸರ್ಬಿಯಾ ಜೋಡಿಯ ಆಕ್ರಮಣಕಾರಿ ಆಟವನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದ ಬೋಪಣ್ಣ ಹಾಗೂ ಫ್ಲೋರಿನ್, ಮುಖಭಂಗ ಅನುಭವಿಸಿದರು.

ಪಂದ್ಯದ ಆರಂಭಿಕ ಸೆಟ್‍ನಲ್ಲಿ 3-6ರ ಹಿನ್ನಡೆ ಅನುಭವಿಸಿದ್ದ ಬೋಪಣ್ಣ, ನಂತರ ಎರಡನೇ ಸೆಟ್‍ನಲ್ಲಿ ಹೋರಾಟಕಾರಿ ಪ್ರದರ್ಶನದಿಂದ 7-5 ಮುನ್ನಡೆಯೊಂದಿಗೆ ಪಂದ್ಯದಲ್ಲಿ ಸಮಬಲ ಸಾಧಿಸಿತ್ತು. ಆದರೆ, ಮೂರನೇ ಸೆಟ್‍ನಲ್ಲಿ ಮತ್ತೆ ವೈಫಲ್ಯ ಕಂಡ ಬೋಪಣ್ಣ ಜೋಡಿ ಟೂರ್ನಿಯಿಂದ ಹೊರಬಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; 'ಅನಿವಾರ್ಯ ಕಾರಣ' ಎಂದ ವಿವಿ