ನವದೆಹಲಿ: ಏಷ್ಯನ್ ಕಾಂಟಿನೆಂಟಲ್ ಮಹಿಳಾ ರ್ಯಾಪಿಡ್ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಹಿಳಾ ಗ್ರಾಂಡ್ ಮಾಸ್ಟರ್ ತಾನಿಯಾ ಸಚದೇವ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಏಳು ಸುತ್ತಿನ ಪಂದ್ಯ-ಗಳಲ್ಲಿ ಐದರಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡ ಸಚ್ ದೇವ್, ಏಳು ಪಾಯಿಂಟ್ಸ್ ಗಳಿಗೆ ಬದಲಾಗಿ ಆರು ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.
ಚೀನಾ ಸ್ಪರ್ಧಿ ಟಾನ್ ಝೊಂಗ್ಯಿ ಕೂಡ ಇಷ್ಟೇ ಅಕವನ್ನು ಪಡೆದು ಸಚ್ ದೇವ್ ಜತೆಗೆ ಜಂಟಿ ಅಗ್ರಸ್ಥಾನವನ್ನು ಪಡೆದರಾದರೂ, ಆಂತರಿಕ ಟೈಬ್ರೇ- ಕರ್-ನಿಂದಾಗಿ ಸಚ್‍ದೇವ್ ರಜತ ಪದಕಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾಯಿತು.