ಜಕಾರ್ತಾ: ಇಂಡೋನೇಷಿಯಾದ ಲಿಂಡವೇಣಿ ಫನೆತ್ರಿ ಅವರ ವಿರುದ್ಧ ಗೆಲುವು ಸಾಧಿಸಿದ ನಂತರ ಪ್ರತಿಕ್ರಿಯಿಸಿದ ಸೈನಾ ನೆಹ್ವಾಲ್, ನಾನು ಫೈನಲ್ ಗೆ ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಈ ವಾರ ನಡೆದ ಪಂದ್ಯಗಳಲ್ಲಿ ಇಂದಿನ ಪಂದ್ಯ ಕಠಿಣವಾಗಿತ್ತು. ಕ್ರೀಡಾಭಿಮಾನಿಗಳಿಂದ ತುಂಬಿದ್ದ ಅಂಗಳದಲ್ಲಿ ಆಡುವಾಗ ನನ್ನ ಮೇಲೆ ತೀವ್ರ ಒತ್ತಡವಿತ್ತು. ನನ್ನ ಎದುರಾಳಿ ಲಿಂಡವೇಣಿ ಯಾವುದೇ ಒತ್ತಡವಿಲ್ಲದೆ ಸಲೀಸಾಗಿ ಆಡುತ್ತಿದ್ದರು ಎಂದು ಹೇಳಿದ್ದಾರೆ.