ಕ್ರೀಡೆ

ಪದಕ ಖಚಿತಪಡಿಸಿದ ಸೈನಾ

ಜಕಾರ್ತ: ವಿಶ್ವದ ಎರಡನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇದೇ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ. ಶುಕ್ರವಾರ
ನಡೆದ 8ರ ಘಟ್ಟದ ಪಂದ್ಯದಲ್ಲಿ ಅವರು, ಚೀನಾದ ಯಿಹಾನ್ ವಾಂಗ್ ಅವರನ್ನು 21-5, 19-21, 21-19 ಗೇಮ್ ಗಳ ಅಂತರದಲ್ಲಿ ಸೋಲಿಸಿ, ಉಪಾಂತ್ಯಕ್ಕೆ ಪ್ರವೇಶ ಪಡೆದು ಕನಿಷ್ಟ ಕಂಚಿನ ಪದಕವನ್ನಂತೂ ಖಚಿತಪಡಿಸಿದ್ದಾರೆ.

ಒಂದು ಗಂಟೆ 13 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಮೊದಲ ಗೇಮ್ ಗೆದ್ದ ಸೈನಾ ನೆಹ್ವಾಲ್, ದ್ವಿತೀಯ ಗೇಮ್ ನಲ್ಲಿ ಸೋಲುಂಡರು. ಆದರೆ, ಮೂರನೇ ಗೇಮïನಲ್ಲಿ
ಮತ್ತೆ ಪುಟಿದೆದ್ದ ಅವರು, ಮಿಂಚಿನ ಆಟವಾಡಿ ಜಯ ಸಾಧಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್‍ಶಿಪ್‍ನ ಉಪಾಂತ್ಯಕ್ಕೆ ಕಾಲಿಟ್ಟರು. ಹ್ಯಾಟ್ರಿಕ್ ವಂಚಿತೆ ಸಿಂಧು ಇತ್ತ ಪ್ರತಿಷ್ಠಿತ ಟೂರ್ನಿಯಲ್ಲಿ ಹ್ಯಾಟ್ರಿಕ್ ಪದಕದತ್ತ ದಿಟ್ಟಿ ಹರಿಸಿದ್ದ ಭಾರತದ ಪ್ರತಿಭಾನ್ವಿತ ಆಟಗಾರ್ತಿ ಪಿ.ವಿ. ಸಿಂಧು ನಿರಾಸೆ ಅನುಭವಿಸಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದ. ಕೊರಿಯಾ ಆಟಗಾರ್ತಿ ಸುಂಗ್ ಜೀ ಹ್ಯುನ್ ಎದುರು 17-21, 21-19, 16-21ರ ಮೂರು ಗೇಮ್ ಗಳ ಆಟದಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು. ದಿಟ್ಟ ಹೋರಾಟದ ಮಧ್ಯೆಯೂ ಮೊದಲ ಗೇಮ್ ಅನ್ನು ಕಳೆದುಕೊಂಡ ಸಿಂಧು, 2ನೇ ಗೇಮïನಲ್ಲಿ ಪ್ರಬಲವಾಗಿ ತಿರುಗಿಬಿದ್ದರಾದರೂ, ಮೂರನೇ ಗೇಮïನಲ್ಲಿ ಕೊರಿಯಾ ಆಟಗಾರ್ತಿಯ ಚಾಕಚಕ್ಯತೆಯ ಹಾಗೂ ಬಿರುಸಿನ ಆಟಕ್ಕೆ ಶರಣಾದರು. 2013 ಹಾಗೂ 2014ರ ಎರಡೂ ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಕಂಚಿನ ಪದಕ ಗೆದ್ದಿದ್ದ ಸಿಂಧು ಈ ಬಾರಿ ಮುಗ್ಗರಿಸಿದರು.

SCROLL FOR NEXT