ಕಿಂಗ್ಸ್ಟ ನ್: ಇದೇ ಮಾಸಾಂತ್ಯದ ವೇಳೆಗೆ ಚೀನಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಜಮೈಕಾದ ಅಥ್ಲೀಟ್ಗ ಳಿಗಾಗಿ ಪಾನ್ನ ಲ್ಲಿ ಆಯೋಜಿಸಲಾಗಿರುವ ಅಭ್ಯಾಸ ಶಿಬಿರದಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ದೂರ ಸರಿದಿದ್ದಾರೆ.
ಜಮೈಕಾ ಅಥ್ಲೀಟ್ ತಂಡದ ವ್ಯವಸ್ಥಾಪಕ ಲುಡ್ಲೊ ವ್ಯಾಟ್ಸ್ ಈ ಬಗ್ಗೆ ಮಾಹಿತಿ ನೀಡಿರುವುದಾಗಿ 'ಐಬಿಎನ್ ಲೈವ್ ಜಾಲತಾಣ' ವರದಿ ಮಾಡಿದೆ. 'ವಿಶ್ವ ಅಥ್ಲೆಟಿಕ್ಸ್ ಗಾಗಿ ವಿಶೇಷ ತಯಾರಿಯಲ್ಲಿ ತೊಡಗಿರುವ ಉಸೇನ್ ಬೋಲ್ಟ್, ಈ ಸಂಬಂಧ ಕೆಲವಾರು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಹಾಗಾಗಿ, ಅವರು ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುತ್ತಿಲ್ಲ'' ಎಂದು ವ್ಯಾಟ್ಸ್ ತಿಳಿಸಿದ್ದಾರೆ.