ಕ್ರೀಡೆ

ಮಾಜಿ ಫುಟ್ಬಾಲಿಗ ನಿಧನ

Mainashree

ಬೆಂಗಳೂರು: ಕರ್ನಾಟಕದ ಮಾಜಿ ಫುಟ್ಬಾಲ್ ಆಟಗಾರ ಡಿ. ಚಂದ್ರಶೇಖರ್ (69) ಭಾನುವಾರ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಆರಂಭದಲ್ಲಿ ಎಚ್‍ಎಎಲ್ ಕಿರಿಯರ ತಂಡದಲ್ಲಿ ಆಡುತ್ತಿದ್ದ ಇವರು, 1967ರಿಂದ 1978ರವರೆಗೆ ಹಿರಿಯರ ತಂಡದ ಪರ ಆಡಿದ್ದರು.

ಈ ಸಂದರ್ಭದಲ್ಲಿ ಎಚ್ಎಎಲ್ ತಂಡ ಸಾಕಷ್ಟು ಯಶಸ್ಸು ಸಾಧಿಸಿತ್ತು. ಎಚ್ಎಎಲ್ ಪರ ಚಂದ್ರಶೇಖರ್ ಡುರಾಂಡ್ ಕಪ್,ಡಿಸಿಎಂ ರೋವರ್ಸ್ ಕಪ್‍ನಲ್ಲಿ ಆಡಿದ್ದರು.

SCROLL FOR NEXT