ಕ್ರೀಡೆ

ಜೊಕೊವಿಚ್‍ಗೆ ಗಾಂಜಾ ಕಾಟ!

Mainashree

ಟೊರಾಂಟೊ: ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತಾವು ಗಾಂಜಾ ವಾಸನೆಯಿಂದ ಪದೇ ಪದೇ ವಿಚಲಿತರಾಗಿದ್ದಾಗಿ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್ ಆರೋಪಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಫ್ಯ್ರಾನ್ಸ್ ಆಟಗಾರ ಜೆರೆಮಿ ಚಾರ್ಡಿ ವಿರುದ್ಧ ಸೆಣಸುವ ಸಂದರ್ಭದಲ್ಲಿ ತಮಗೆ ಪದೇ ಪದೇ ಗಾಂಜಾ ವಾಸನೆ ಮೂಗಿಗೆ ಬಡಿಯುತ್ತಿತ್ತು. ಪಂದ್ಯ ನಡೆಯುತ್ತಿದ್ದ ಅಂಗಣದ ಹತ್ತಿರದಲ್ಲೇ ಯಾರೋ ಈ ಗಾಂಜಾ ¸ ಸೇವಿಸುತ್ತಿದ್ದರೆಂದು ಅನ್ನಿಸುತ್ತಿತ್ತು.

ಇದು ತನ್ನ ಏಕಾಗ್ರತೆಗೆ ಭಂಗ ತರುತ್ತಿತ್ತು ಎಂದು ಸರ್ಬಿಯಾ ಆಟಗಾರ ಪಂದ್ಯದ ನಂತರ ಅಂಪೈರ್‍ಗೆ ದೂರು ನೀಡಿದ್ದಾರೆಂದು `ಐಬಿಎನ್ ಲೈವ್' ವರದಿ ಮಾಡಿದೆ. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನೊವಾಕ್,``ಗಾಂಜಾದ ಆ ಘಾಟು ವಾಸನೆ ನನಗೆ ಕಿರಿಕಿರಿ ಉಂಟು ಮಾಡಿತು.

ಅದನ್ನು ಸೇದುತ್ತಿದ್ದ ಪುಣ್ಯಾತ್ಮ ನನ್ನ ಫೈನಲ್ ಪಂದ್ಯವನ್ನು ನೋಡಲು ಆಗಮಿಸದಿರಲಿ ಎಂದು ಆಶಿಸುತ್ತೇನೆ ಎಂದರು. ಅಂದಹಾಗೆ ಸೆಮಿಫೈನಲ್ ಪಂದ್ಯದಲ್ಲಿ ಚಾರ್ಡಿ ವಿರುದ್ಧ 6-4, 6-4 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದ ನೊವಾಕ್, ಪ್ರಶಸ್ತಿ ಸುತ್ತಿನಲ್ಲಿ ಬ್ರಿಟನ್ ನ ಆ್ಯಂಡಿ ಮರ್ರೆ ವಿರುದ್ಧ ಸೆಣಸಲಿದ್ದಾರೆ.

SCROLL FOR NEXT