ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈಗ, ಮಹಾರಾಷ್ಟ್ರದ ಹುಲಿಗಳ ರಾಯಭಾರಿಯಾಗಲು ಮುಂದಾಗಿದ್ದು, ಹುಲಿಗಳ ಸಂರಕ್ಷಣೆಯತ್ತ ಆಸಕ್ತಿ ತೋರಿದ್ದಾರೆ. ಕಳೆದ ಗುರುವಾರ ಮಹಾರಾಷ್ಟ್ರ ಅರಣ್ಯ ಸಚಿವರಾದ ಸುಧೀರ್ ಮುಂಗಂಟಿವರ್ ಅವರಿಗೆ ಪತ್ರಬರೆದಿರುವ ಸಚಿನ್, ಹುಲಿಗಳ ಸಂರಕ್ಷಣಾ ಯೋಜನೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ರಾಜ್ಯದಲ್ಲಿ ಹುಲಿಗಳನ್ನು ಸಂರಕ್ಷಿಸುವ ಯೋಜನೆಗೆ ಕೈಜೋಡಿಸುವುದಾಗಿ ತಿಳಿಸಿದ್ದರು.ಇತ್ತೀಚಿಗಷ್ಟೇ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್ ಹುಲಿಗಳ ರಾಯಭಾರಿಯಾದ ಮೂರು ದಿನಗಳ ಅವಧಿಯಲ್ಲಿ ಸಚಿನ್ ಸಹ, ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಗಣ್ಯರು ಹುಲಿಗಳ ಸಂರಕ್ಷಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.