ಮಂಗಳವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಯು ಮುಂಬೈ ನಾಯಕ ಪ್ರದೀಪ್ ಕುಮಾರ್, ತೆಲುಗು ಟೈಟನ್ಸ್ ರಕ್ಷಣಾತ್ಮಕ ವಿಭಾಗಕ್ಕೆ ಸವಾಲಾದ ಪರಿ 
ಕ್ರೀಡೆ

ಸೋತರೂ ಮುಂಬಾ ಅಗ್ರಸ್ಥಾನ ಅಭೇದ್ಯ

ಆಕ್ರಮಣಕಾರಿ ಆಟದ ಮೂಲಕ ಯು ಮುಂಬಾ ತಂಡದ ಮೇಲೆ ಸವಾರಿ ನಡೆಸಿದ ತೆಲುಗು ಟೈಟಾನ್ಸ್, ಪ್ರಸಕ್ತ ಪ್ರೊ ಕಬಡ್ಡಿಯ...

ಪುಣೆ: ಆಕ್ರಮಣಕಾರಿ ಆಟದ ಮೂಲಕ ಯು ಮುಂಬಾ ತಂಡದ ಮೇಲೆ ಸವಾರಿ ನಡೆಸಿದ ತೆಲುಗು ಟೈಟಾನ್ಸ್, ಪ್ರಸಕ್ತ ಪ್ರೊ ಕಬಡ್ಡಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಜಯ ಸಾಧಿಸಿದೆ.

ಮಂಗಳವಾರ ಶಿವ ಛತ್ರಪತಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ 46-25 ಅಂಕಗಳ ಅಂತರದಲ್ಲಿ ಜಯ ದಾಖಲಿಸಿತು. ಪ್ರಸಕ್ತ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿ ಪ್ರಬಲ ತಂಡಗಳಾಗಿ ಬಿಂಬಿತವಾಗಿದ್ದ ಯು ಮುಂಬಾ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಈ ಪಂದ್ಯದಲ್ಲಿ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದವು.

ಇಷ್ಟು ದಿನಗಳ ಕಾಲ ಬೆಂಚು ಕಾಯಿಸಿದ್ದ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರಮುಖ ಆಟಗಾರರ ಹೊರತಾಗಿಯೂ ಉಭಯ ತಂಡಗಳು ಉತ್ತಮ ಕಾದಾಟ ನಡೆಸಿದವು. ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಉತ್ತಮ ಕಾದಾಟ ನಡೆಸಿದವು.

ಪಂದ್ಯದ ಆರಂಭದಲ್ಲಿ ಉಭಯ ತಂಡ ಉತ್ತಮ ಮುನ್ನಡೆ ಸಾಧಿಸಿತ್ತು. ಪಂದ್ಯದ 2ನೇ ನಿಮಿಷದಲ್ಲಿ ಯು ಮುಂಬಾ ತಂಡ ನಾಯಕ ಪ್ರದೀಪ್ ಕುಮಾರ್ ಅವರ ರೈಡ್ ನಲ್ಲಿ ಪಾಯಿಂಟ್ಸ್ ಖಾತೆ ತೆರೆಯಿತು. ನಂತರ 5ನೇ ನಿಮಿಷದ ವೇಳೆಗೆ ಉಭಯ ತಂಡಗಳು 3-3ರ ಸಮಬಲ ಸಾಧಿಸಿದ್ದರೆ, 11ನೇ ನಿಮಿಷದ ವೇಳೆಗೆ 9-9ರ ಸಮಬಲದ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಯಿತು.

ಪಂದ್ಯದ 15ನೇ ನಿಮಿಷದ ವೇಳೆ ತೆಲುಗು ತಂಡ ಮುಂಬೈ ತಂಡವನ್ನು ಆಲೌಟ್ ಮಾಡುವ ಮೂಲಕ 15-9ರ ಮುನ್ನಡೆ ಪಡೆಯಿತು. ಇದೇ ಆಕ್ರಮಣಕಾರಿ ಆಟ ಮುಂದುವರೆಸಿದ ತೆಲುಗು ಪಡೆ ಪಂದ್ಯದ ಮೊದಲಾರ್ಧದ ವೇಳೆಗೆ 20-12 ಅಂಕಗಳ ಮೇಲುಗೈ ಸಾಧಿಸಿತು. ಪಂದ್ಯದ ದ್ವಿತೀಯಾರ್ಧದಲ್ಲೂ ತನ್ನ ಸಂಘಟಿತ ದಾಳಿ ಮುಂದುವರೆಸಿದ ತೆಲುಗು ಟೈಟಾನ್ಸ್ ತಂಡ ನಿರಂತರವಾಗಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು. 32ನೇ ಹಾಗೂ 39ನೇ ನಿಮಿಷದಲ್ಲಿ ಮುಂಬೈ ತಂಡವನ್ನು ಆಲೌಟ್ ಮಾಡಿದ ಹೈದರಾಬಾದ್ ತಂಡ, ಅಂತಿಮವಾಗಿ 21 ಅಂಕಗಳ ಅಂತರದಲ್ಲಿ ಜಯಿಸಿತು.

ಬೆಂಗಳೂರು ಕೈತಪ್ಪಿದ 2ನೇ ಸ್ಥಾನದ ಅವಕಾಶ: ಯು ಮುಂಬಾ ತಂಡ ಈ ಪಂದ್ಯಕ್ಕೂ ಮುನ್ನ ಆಡಿದ್ದ 13 ಪಂದ್ಯಗಳಲ್ಲಿ 12ರಲ್ಲಿ ಗೆಲವು ದಾಖಲಿಸುವುದರೊಂದಿಗೆ 60 ಅಂಕಗಳನ್ನು ಸಂಪಾದಿಸುವ ಮೂಲಕ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡಿತು.
ಇನ್ನು ತೆಲುಗು ಟೈಟಾನ್ಸ್ ತಂಡ 13 ಪಂದ್ಯಗಳಿಂದ 7ರಲ್ಲಿ ಗೆಲುವು ಹಾಗೂ 3ರಲ್ಲಿ ಸೋಲು ಮತ್ತು 3ರಲ್ಲಿ ಟೈ ಸಾಧಿಸುವ ಮೂಲಕ 45 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು.

ಬೆಂಗಳೂರು ಬುಲ್ಸ್ ತಂಡ 13 ಪಂದ್ಯಗಳಿಂದ 8ರಲ್ಲಿ ಜಯ, 5ರಲ್ಲಿ ಸೋಲನುಭವಿಸಿ 43 ಅಂಕಗಳನ್ನು ಸಂಪಾದಿಸಿದೆ. ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಸೋಲನುಭವಿಸಿದ್ದರೆ, ಬೆಂಗಳೂರು ತಂಡ ತನ್ನ ಅಂತಿಮ ಪಂದ್ಯದಲ್ಲಿ ಗೆದ್ದು ದ್ವಿತೀಯ ಸ್ಥಾನಕ್ಕೆ ಏರುವ ಸಾಧ್ಯತೆ ಇತ್ತು. ಆದರೆ ತೆಲುಗು ಟೈಟಾನ್ಸ್ ತಂಡ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಖಚಿತಪಡಸಿಕೊಂಡಿತು.

ಯು ಮುಂಬಾ ತಂಡಕ್ಕೆ ಮೊದಲ ಸ್ಥಾನ ಖಚಿತವಾಗಿರುವುದರಿಂದ, ಸೆಮಿಫೈನಲ್‍ನಲ್ಲಿ ನಾಲ್ಕನೇ ಸ್ಥಾನ ಪಡೆಯಲಿರುವ ತಂಡವನ್ನು ಎದುರಿಸಲಿದೆ. ಈ ಸ್ಥಾನಕ್ಕಾಗಿ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪಾಟ್ನಾ ಪೈರೆಟ್ಸ್ ನಡುವ ಎತೀವ್ರ ಹೋರಾಟ ಏರ್ಪಟ್ಟಿದೆ. ಇನ್ನು ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!