ಕ್ರೀಡೆ

ಆಸೀಫ್, ಭಟ್ ಅಮಾನತು ತೆರವು

Srinivas Rao BV

ಲಾಹೋರ್: ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತುಗೊಂಡಿದ್ದ ಪಾಕಿಸ್ತಾನದ ವೇಗಿ ಮೊಹಮದ್ ಆಸೀಫ್ ಹಾಗೂ ಸಲ್ಮಾನ್ ಭಟ್ ಅವರ ಮೇಲಿನ ಅಮಾನತು ಶಿಕ್ಷೆ ಸೆಪ್ಟೆಂಬರ್ 1 ಕ್ಕೆ ಮುಕ್ತಯಾವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಸ್ಪಷ್ಟಪಡಿಸಿದೆ.

ಸ್ವತಂತ್ರ ಭ್ರಷ್ಟಾಚಾರ ತಡೆ ಟ್ರಿಬ್ಯುನಲ್ ಗೆ ಸಲ್ಲಿಸಲಾಗಿರುವ ಕೆಲ ಪ್ರಮುಖ ಷರತ್ತುಗಳಿಂದಾಗಿ ಈ ಇಬ್ಬರು ಕ್ರಿಕೆಟಿಗರ ಮೇಲಿನ ಅಮಾನತು ಶಿಕ್ಷೆಯು ತೆರವುಗೊಳ್ಳಲಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಲು ಯಾವುದೇ ನಿರ್ಬಂಧವಿಲ್ಲ ಎಂದು ಐಸಿಸಿ ಪುನರುಚ್ಚರಿಸಿದೆ.

2010 ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಪಾಕಿಸ್ತಾನ ತಂಡದಲ್ಲಿದ್ದ ಮೂವರು ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್ ನಡೆಸಿ ಸಿಕ್ಕಿಬಿದ್ದಿದ್ದ ಪ್ರಕರಣ ವಿಶ್ವ ಕ್ರಿಕೆಟ್ ವಲಯವನ್ನು ಅಲ್ಲೋಲಕಲ್ಲೋಲಗೊಳಿಸಿತ್ತು. ಅಗಾ ಪಾಕ್ ತಂಡದ ನಾಯಕತ್ವ ಹೊತ್ತಿದ್ದ ಸಲ್ಮಾನ್ ಭಟ್ ಹಾಗೂ ಮೊಹಮದ್ ಅಮೀರ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆಮಿಷಕ್ಕೆ ಕೆಡವಿದ್ದರು. ವಿಚಾರಣೆ ನಡೆದು 2011 ರ ಫೆಬ್ರವರಿ 5 ರಂದು ಅಮೀರ್ ಗೆ ಐದು ವರ್ಷ ಆಸೀಫ್ ಗೆ ಏಳು ಹಾಗೂ ಸಲ್ಮಾನ್ ಭಟ್ ಗೆ 10 ವರ್ಷಗಳ ನಿರ್ಬಂಧ ವಿಧಿಸಿತ್ತು. ಆನಂತರ ಟ್ರಿಬ್ಯುನಲ್, ಆಸೀಫ್ ಹಾಗೂ ಅಮೀರ್ ಗೆ ವಿಧಿಸಿದ್ದ 5 ವರ್ಷಗಳ ಶಿಕ್ಷೆಯನ್ನು 2 ವರ್ಷಕ್ಕೆ ಇಳಿಸಿದರೆ, ಭಟ್ ಮೇಲಿನ 10 ವರ್ಷಗಳ ಅಮಾನತು ಶಿಕ್ಷೆಯನ್ನು 5 ವರ್ಷಗಳಿಗೆ ಮಿತಿಗೊಳಿಸಲಾಗಿತ್ತು.

SCROLL FOR NEXT