ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‍ನಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಹಿಂದಿರುಗಿದ್ದಾರೆ.
ಫೈನಲ್‍ನಲ್ಲಿ ಸ್ಪೇನ್ ಆಟಗಾರ್ತಿ ಕರೋ ಲಿನ್ ಮರಿನ್ ವಿರುದ್ಧ ಸೋಲನುಭವಿಸಿದರೂ, ಆಕೆಯನ್ನು ಎರಡನೇ ಸ್ಥಾನಕ್ಕೆ ದೂಡುವಲ್ಲಿ 25ರ ಹರೆಯದ ಸೈನಾ ಯಶಸ್ಸು ಕಂಡಿದ್ದಾರೆ.
ಭಾರತದ ಮತ್ತೋರ್ವ ಯುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಒಂದು ಸ್ಥಾನ ಕುಸಿತ ಕಂಡಿದ್ದು ಪ್ರಸಕ್ತ 14ನೇ ರ್ಯಾಂಕ್‍ನಲ್ಲಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ವೃತ್ತಿಬದುಕಿನಲ್ಲೇ ಶ್ರೇಷ್ಠ 10ನೇ ರ್ಯಾಂಕಿಂಗ್ ಸ್ಥಾನ ಅಲಂಕರಿಸಿದ್ದಾರೆ.